ಮರಾಠಿ ಸಾಹಿತ್ಯ-ಸಿನೆಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಸ್ಫೂರ್ತಿ

ಇತ್ತೀಚಿನ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ನ ಯಶಸ್ಸಿನಿಂದ ಸ್ಫೂರ್ತಿಗೊಂಡು ಅದನ್ನು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ರಿಮೇಕ್ ಮಾಡಲು
ಮೇಘನಾ ರಾಜ್
ಮೇಘನಾ ರಾಜ್

ಬೆಂಗಳೂರು: ಇತ್ತೀಚಿನ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ನ ಯಶಸ್ಸಿನಿಂದ ಸ್ಫೂರ್ತಿಗೊಂಡು ಅದನ್ನು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ರಿಮೇಕ್ ಮಾಡಲು ರಾಕ್ಲೈನ್ ವೆಂಕಟೇಶ್ ಹಕ್ಕುಗಳನ್ನು ಖರೀದಿಸಿದ್ದರು. ಮತ್ತೊಂದು ತಂಡ ಸುಹಾಸ್ ಶಿರ್ವಾಲ್ಕರ್ ಅವರ ಕಾದಂಬರಿ ಆಧಾರಿತ ೨೦೧೩ರ 'ದುನಿಯಾದ್ರಿ' ಸಿನೆಮಾದಿಂದ ಸ್ಫೂರ್ತಿ ಪಡೆದು ಕನ್ನಡ ಚಿತ್ರಕ್ಕೆ ಸಜ್ಜಾಗಿದ್ದಾರೆ.

ಇದು ಮಸಾಲಾ ಸಿನೆಮಾ ಎನ್ನಲಾಗಿದ್ದು ಆದರೂ ಸೂಕ್ಷ್ಮತೆಯನ್ನು ಮೆರೆಯಲಾಗಿದೆ ಎನ್ನುತ್ತವೆ ಮೂಲಗಳು. ಬಲ್ಲ ಮೂಲಗಳ ಪ್ರಕಾರ ಮೈನಾ ಖ್ಯಾತಿಯ ಚೇತನ್, ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್, ಮೇಘನಾ ರಾಜ್ ಹಾಗೂ ಸುಶ್ಮಿತಾ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಉತ್ತರದ ನಿರ್ಮಾಪಕರು ಇದನ್ನು ನಿರ್ಮಿಸುತ್ತಿದ್ದು ಕನ್ನಡದ ಪ್ರೇಕ್ಷಕರಿಗೆ ಈ ಸಿನೆಮಾ ನೀಡಲು ಚಿತ್ರ ಕಥೆ ಬರೆಯಲು ಕೆಲವು ಬರಹಗಾರರನ್ನು ಆಯ್ಕೆ ಮಾಡಿದ್ದಾರಂತೆ. ಮೂಲಗಳ ಪ್ರಕಾರ ಚೊಚ್ಚಲ ನಿರ್ದೇಶಕ ಕುಮಾರೇಶ್ವರ್ ಈ ಸಿನೆಮಾ ನಿರ್ದೇಶಿಸಲಿದ್ದಾರೆ.

ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ'ದಿಂದ ಚೇತನ್ ಈಗ ಹೊರಬಂದಿದ್ದು 'ಮೈನಾ' ನಂತರದ ಸಿನೆಮಾ ಇದಾಗಲಿದೆ. ರಾಜವರ್ಧನ್ ಅವರಿಗೂ ಇದು ಎರಡನೆ ಸಿನೆಮಾ. ಮೇಘನಾ 'ಭುಜಂಗ' ಮತ್ತು 'ಅಲ್ಲಮ' ಸಿನೆಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com