'ಹಲಸು' ಎಂಬ ಮಾಂತ್ರಿಕ ಹಣ್ಣು; ಕೇರಳದ ೧೦ನೇ ತರಗತಿ ವಿದ್ಯಾರ್ಥಿ ನಿರ್ದೇಶಿಸಿದ ಚಿತ್ರ!

ಹಲಸಿನ ಹಣ್ಣಿನ ರುಚಿಗೆ ಮನಸೋಲದವರು ಯಾರು. ಈಗ ಕೇರಳದ ೧೦ನೇ ತರಗತಿಯ ಬಾಲಕ ಈ ಹಣ್ಣಿನಿಂದ ಒದಗುವ ಆರೋಗ್ಯ ಭಾಗ್ಯಗಳ ಕುರಿತು 'ಚಕ್ಕ ಪರಂಜ ಕಥಾ' ಎಂಬ ೨೦ ನಿಮಿಷದ ಮಲಯಾಳಂ
'ಚಕ್ಕ ಪರಂಜ ಕಥಾ'ದ ಪೋಸ್ಟರ್
'ಚಕ್ಕ ಪರಂಜ ಕಥಾ'ದ ಪೋಸ್ಟರ್

ತಿರುವನಂತಪುರಮ್: ಹಲಸಿನ ಹಣ್ಣಿನ ರುಚಿಗೆ ಮನಸೋಲದವರು ಯಾರು. ಈಗ ಕೇರಳದ ೧೦ನೇ ತರಗತಿಯ ಬಾಲಕ ಈ ಹಣ್ಣಿನಿಂದ ಒದಗುವ ಆರೋಗ್ಯ ಭಾಗ್ಯಗಳ ಕುರಿತು 'ಚಕ್ಕ ಪರಂಜ ಕಥಾ' ಎಂಬ ೨೦ ನಿಮಿಷದ ಮಲಯಾಳಂ ಭಾಷೆಯ ಸಣ್ಣ ಸಿನೆಮಾ ನಿರ್ದೆಶಿಸಿದ್ದಾನೆ. ಕೊಲ್ಲಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅರೋಮಲ್ ಸತ್ಯನ್ ತಾನೇ ಸ್ಕ್ರಿಪ್ಟ್ ಬರೆದು ಈ ಚಿತ್ರ ನಿರ್ದೇಶಿಸಿದ್ದಾನೆ.

ಕೇರಳದಲ್ಲಿ ಹೇರಳವಾಗಿ ಬೆಳೆಯುವ ಆ ಹಣ್ಣನ್ನು ಇಲ್ಲಿ ಪ್ರಾದೇಶಿಕವಾಗಿ ನಿರ್ಲ್ಯಕ್ಷಿಸುತ್ತಾರೆ ಆದರೆ ಇದು ವಿರಳವಾಗಿರುವ ಪ್ರದೇಶಗಳಲ್ಲಿ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದನ್ನು ಕಂಡು ನನಗೆ ಈ ಸಿನೆಮಾ ಮಾಡಬೇಕೆನ್ನಿಸುತು ಎನ್ನುತ್ತಾರೆ ಯುವ ನಿರ್ದೇಶಕ.

ಹಲಸು ಇಷ್ಟಪಡದ ಬಾಲಕನ ಮೂಲಕ ಈ ಕಥೆ ಹೇಳಿದ್ದು, ಒಳ್ಳೆಯ ನೋಟ ಉಳಿಸಿಕೊಳ್ಳಲು ಹಾಗೂ ಹಲವಾರು ಖಾಯಿಲೆಗಳನ್ನು ಗುಣಮುಖಗೊಳಿಸುವ ಹಲಸಿನ ಪ್ರಯೋಜನಗಳನ್ನು ಕಂಡುಕೊಡಮೇಲೆ ಆ ಬಾಲಕ ಹೇಗೆ ಬದಲಾಗುತ್ತಾನೆ ಎಂಬುದೇ ಕಥೆ. ರಕ್ತದೊಟ್ಟಡ ಮತ್ತು ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಡಲು ಹಲಸು ಸಹಕಾರಿ ಎನ್ನಲಾಗುತ್ತದೆ.

ಹಲಸಿನ ಇತಿಹಾಸವನ್ನು ಕೂಡ ಹೇಳುವ ಈ ಚಿತ್ರ, ಈ ಹಣ್ಣು ಈ ದೇಶಕ್ಕೆ ಬಂದ ರೀತಿ ಮತ್ತು ಶ್ರೀಲಂಕಾ ಮತ್ತು ಥೈಲ್ಯಾಂಡ್ ಗಳಲ್ಲಿ ಇದರ ಪ್ರಖ್ಯಾತಿ ಬಗ್ಗೆಯೂ ಸಿನೆಮಾ ಚರ್ಚಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com