'ತಿಥಿ' ಕನ್ನಡ ಚಿತ್ರಕ್ಕೆ ಎರಡು ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡದ ಸಿನಿಮಾ 'ತಿಥಿ'ಯ ಯಶಸ್ಸಿನ ಓಟ ಇನ್ನೂ ಮುಂದುವರೆದಿದೆ. ಇದುವರಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರೋ...
ತಿಥಿ ಪೋಸ್ಟರ್
ತಿಥಿ ಪೋಸ್ಟರ್

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡದ ಸಿನಿಮಾ 'ತಿಥಿ'ಯ ಯಶಸ್ಸಿನ ಓಟ ಇನ್ನೂ ಮುಂದುವರೆದಿದೆ. ಇದುವರಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರೋ ಈ ಸಿನಿಮಾದ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ.

ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಿಥಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಸಿನಿಮಾ ವಿಭಾಗಗಳಲ್ಲಿ ತಿಥಿ ರಾರಾಜಿಸಿದೆ.

ಕನ್ನಡದ ಚಿತ್ರವೊಂದು ಈ ಪರಿ ವಿಶ್ವದ ಮೂಲೆ ಮೂಲೆ ಪ್ರಯಾಣ ಮಾಡಿ ಗೆಲುವಿನ ನಗೆಯೊಂದಿಗೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ತಿರೋದು ಸಂತಸದ ಸಂಗತಿ. ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಶಾಂಘೈಗೆ ತೆರಳಿ ಈ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಶಾಂಘೈ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಂದು ವಿಭಾಗದಲ್ಲಿ ಕೇವಲ 5 ಸಿನಿಮಾಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅತ್ಯುತ್ತಮ ಚಿತ್ರಕತೆಗೆ ಪ್ರಶಸ್ತಿ ದೊರಕಿರುವುದಕ್ಕೆ ಚಿತ್ರದ ಬರಹಗಾರ ಈರೇಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ. ಇದುವರೆಗೂ ತಿಥಿ ಸಿನಿಮಾ ಒಟ್ಟು 12 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com