'ಪಿತೃ ಸಮಾನ' ಮೋಹನ್ ಭಾಗವತ್ ಭೇಟಿ ಮಾಡಿದ ಎಫ್ ಟಿ ಐ ಐ ಅಧ್ಯಕ್ಷ ಚೌಹಾಣ್

ಭಾರತ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆ (ಎಫ್ ಟಿ ಐ ಐ) ಅಧ್ಯಕ್ಷ ಗಜೇಂದ್ರ ಚೌಹಾಣ್ ಅವರು ಗುರುವಾರ ಪುತ್ರನ ಮದುವೆಗೆ ಆಹ್ವಾನಿಸಲು ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಅವರನ್ನು
ಎಫ್ ಟಿ ಐ ಐ ಅಧ್ಯಕ್ಷ ಗಜೇಂದ್ರ ಚೌಹಾಣ್
ಎಫ್ ಟಿ ಐ ಐ ಅಧ್ಯಕ್ಷ ಗಜೇಂದ್ರ ಚೌಹಾಣ್
ನಾಗಪುರ: ಭಾರತ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆ (ಎಫ್ ಟಿ ಐ ಐ) ಅಧ್ಯಕ್ಷ ಗಜೇಂದ್ರ ಚೌಹಾಣ್ ಅವರು ಗುರುವಾರ ಪುತ್ರನ ಮದುವೆಗೆ ಆಹ್ವಾನಿಸಲು ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದಾರೆ. 
ಈ ತುರ್ತು ಭೇಟಿಯ ಊಹಾಪೋಹಗಳನ್ನು ತಳ್ಳಿಹಾಕಿದ ಚೌಹಾಣ್ ಭಾಗವತ್ ತಮಗೆ 'ಪಿತೃ ಸಮಾನ' ಎಂದಿದ್ದು ಎಫ್ ಟಿ ಐ ಐ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುವುದಕ್ಕೆ ಆರ್ ಎಸ್ ಎಸ್ ಪಾತ್ರ ಏನಿಲ್ಲ ಎಂದಿದ್ದಾರೆ. 
"ನನ್ನ ಪುತ್ರನ ಮದುವೆ ಸಮಾರಂಭಕ್ಕೆ ಆಹ್ವಾನಿಸಲು ಬಂದಿದ್ದೆ... ಈ ಭೇಟಿಯ ಸುತ್ತ ಹೆಚ್ಚಿನ ಊಹಾಪೋಹಗಳು ಬೇಡ" ಎಂದು ಆರ್ ಎಸ್ ಎಸ್ ಮುಖ್ಯ ಕಚೇರಿಯಲ್ಲಿ ಭಾಗವತ್ ಅವರನ್ನು ಮಾತ್ರ ಭೇಟಿ ಮಾಡಿ ಹೊರಬಂದ ವೇಳೆಯಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ. 
ಎಫ್ ಟಿ ಐ ಐ ವಿದ್ಯಾರ್ಥಿ ವೃಂದದ ತೀವ್ರ ಪ್ರತಿಭಟನೆಗಳ ನಡುವೆಯೂ ಅಧಿಕಾರ ಸ್ವೀಕರಿಸಿದ್ದ ಚೌಹಾಣ್ ಆವರಿಗೆ, ಅಧ್ಯಕ್ಷಗಾದಿ ಅಲಂಕರಿಸಿದ ನಂತರ ನಾಗಪುರದ ಆರ್ ಎಸ್ ಎಸ್ ಕಚೇರಿಯ ಮೊದಲ ಭೇಟಿ ಇದು. 
ಬಿಜೆಪಿ ಪಕ್ಷದ ನಿಕಟವರ್ತಿ ಎಂದೇ ಗುರುತಿಸಲಾಗಿದ್ದ ಚೌಹಾಣ್ ಅವರನ್ನು ಈ ಪ್ರಖ್ಯಾತ ಸಂಸ್ಥೆಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು 139 ದಿನಗಳ ಪ್ರತಿಭಟನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com