ನಟ ಗಣೇಶ್
ನಟ ಗಣೇಶ್

ಶ್ರಮಜೀವಿ ಗಣೇಶ್ 'ಜೂಮ್' ನಲ್ಲಿ ಹೊಸ ಶೈಲಿಗೆ ಮೊರೆ

ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮದ ನಿರೂಪಕನಾಗಿದ್ದ ನಟ ಗಣೇಶ್ ಕನ್ನಡ ಚಿತ್ರೋದ್ಯಮದ ಬೆಳ್ಳಿತೆರೆಯಲ್ಲಿ ಪ್ರಧಾನ ನಟನಾಗಿ ತಳವೂರಿರುವದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ.
Published on
ಬೆಂಗಳೂರು: ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮದ ನಿರೂಪಕನಾಗಿದ್ದ ನಟ ಗಣೇಶ್ ಕನ್ನಡ ಚಿತ್ರೋದ್ಯಮದ ಬೆಳ್ಳಿತೆರೆಯಲ್ಲಿ ಪ್ರಧಾನ ನಟನಾಗಿ ತಳವೂರಿರುವದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ. ತಮ್ಮ ಹಲವಾರು ಸಿನೆಮಾಗಳಲ್ಲಿ ಹಾಸ್ಯ ಪ್ರವೃತ್ತಿಯ ನಟನೆಯನ್ನು ಮುಂದುವರೆಸಿದ್ದರು ಶುಕ್ರವಾರ ಬಿಡುಗಡೆಯಾಗಲಿರುವ 'ಜೂಮ್'ನಲ್ಲಿ ಮತ್ತೆ ಸಂಪೂರ್ಣ ಹಾಸ್ಯ ನಟನೆಗೆ ಹಿಂದಿರುಗಿರುವುದಕ್ಕೆ ಗಣೇಶ್ ಸಂತಸರಾಗಿದ್ದಾರೆ. 
ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆ ಬಿಡುಗಡೆಯಾಗುತ್ತಿರುವ ಸಿನೆಮಾದ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸುವ ಗಣೇಶ್ "'ಜೂಮ್' ಸಂಪೂರ್ಣ ಟೈಮ್ ಪಾಸ್ ಸಿನೆಮಾ. ಈ ಸಿನೆಮಾ ನಿಮಗೆ ಬೋರು ತರಿಸುವುದೇ ಇಲ್ಲ. ಪ್ರಶಾಂತ್ ರಾಜ್ ನಿರ್ದೇಶಿಸರುವ ಬಣ್ಣಬಣ್ಣದ ಚಿತ್ರ ಇದು. ನನ್ನನ್ನು ಹೊಸ ಆಕರ್ಷಕ ಶೈಲಿಯಲ್ಲಿ ಕಾಣುವಂತೆ ಅವರು ಮಾಡಿದ್ದಾರೆ. ಜಾಹಿರಾತು ನಿರ್ದೇಶಕನ ಪಾತ್ರಕ್ಕೆ ಆ ಅವತಾರದ ಅವಶ್ಯಕತೆ ಇತ್ತು" ಎನ್ನುತ್ತಾರೆ ಗಣೇಶ್. 
ಸಿನೆಮಾ ಶ್ರಮ ಮತ್ತು ನಾಜೂಕಿನ ಕೆಲಸದ ನಡುವೆ ಸುತ್ತುತ್ತದೆ. ನಿಜಜೀವನದಲ್ಲೂ ಇವೆರಡು ಅವಶ್ಯಕ ಎನ್ನುತ್ತಾರೆ ನಟ.
ಪ್ರಶಾಂತ್ ಅವರ ಹಿಂದಿನ ಸಿನೆಮಾಗಳನ್ನು ನೋಡಿ ಈ ಯೋಜನೆ ಒಪ್ಪಿಕೊಂಡದ್ದಾಗಿ ಹೇಳುವ ನಟ "ನನ್ನ ಹೃದಯಕ್ಕೆ ತಟ್ಟುವ ಸಿನೆಮಾದ ಭಾಗವಾಗಿರುತ್ತೇನೆ ನಾನು. ಯಶಸ್ಸು ಅಥವಾ ವೈಫಲ್ಯ ನಂತರದ್ದು. ಚಿತ್ರತಂಡ ಶ್ರಮವಹಿಸಿದ್ದರೆ ಸಾಕು ಸಿನೆಮಾ ಗೆದ್ದಂತೆ" ಎಂದು ಆತ್ಮವಿಶ್ವಾಸದ ನುಡಿಗೆ ಜಾರುತ್ತಾರೆ ನಟ. 
ಸಿನೆಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ತಾವು ಹಾಸ್ಯಮಯ ಜೀವಿ ಎಂದು ಹೇಳಿಕೊಳ್ಳುವ ನಟ, ಜೀವನದಲ್ಲಿ ಗಂಭೀರವಾಗಿರುವುದು ತಮಗೆ ಗೊತ್ತು ಎನ್ನುತ್ತಾರೆ. "ನನ್ನ ಒಂಟಿ ಸಮಯವನ್ನು ಓದುವ ಮೂಲಕ ಕಳೆಯುತ್ತೇನೆ ಎನ್ನುವ ನಟ, ಜನರನ್ನು ಭೇಟಿ ಮಾಡಿದಾಗ ತಮಾಷೆಗೆ ಜಾರುತ್ತೇನೆ. ನಗುತ್ತ ನನ್ನ ಸುತ್ತ ಉತ್ಸಾಹದಾಯಕ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತೇನೆ. ನನ್ನ ಈ ವರ್ತನೆಯನ್ನು ಪತ್ನಿ ಶಿಲ್ಪಾ ಆಶ್ಚರ್ಯದಿಂದ ನೋಡುತ್ತಾರೆ" ಎನ್ನುತ್ತಾರೆ ಗಣೇಶ್. 
ತಮ್ಮ ಈ ಯಶಸ್ಸಿಗೆ ದೇವರೇ ಕಾರಣ ಎನ್ನುವ ನಟ ಕೈತುಂಬಾ ಕೆಲಸ ಇರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.  "ಒಂದು ಕಾಲದಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೆ. ಈಗ ಕೈತುಂಬಾ ಕೆಲಸ ಇದೆ. ಈಗ ವಿರಮಿಸಲು ಅವಕಾಶವಿಲ್ಲ. ನಾನು ನನ್ನ ಕೆಲಸ ಪ್ರೀತಿಸುತ್ತೇನೆ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com