
ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಈ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಧನಂಜಯ್ ಮತ್ತು ಪರುಲ್ ಯಾದವ್ ನಟಿಸಿರುವ ಈ ಚಿತ್ರದ ಆಡಿಯೋ ಈಗಾಗಲೇ ಜನಪ್ರಿಯವಾಗಿದ್ದು, ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ. ಆದರೆ ಕನ್ನಡ ಚಿತ್ರದ ಬಿಡುಗಡೆಯ ಎರಡು ವಾರಗಳ ನಂತರ ಆ ಎರಡು ಭಾಷೆಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ.
"ನಾನು ಪೋತುಗಡು (ಗೋವಿಂದಾಯನಮಃದ ರಿಮೇಕ್) ತೆಲುಗಿನಲ್ಲಿ ನಿರ್ದೇಶಿಸಿದ ಮೇಲೆ ಅಲ್ಲಿನ ಜನ ನನ್ನ ಮುಂದಿನ ಯೋಜನೆಯ ಬಗ್ಗೆ ಕೇಳುತ್ತಿದ್ದರು. ಇದು ವಿಶಿಷ್ಟವಾದ ಕಥೆ ಮತ್ತು ಎಲ್ಲ ಕಡೆಯೂ ಸಲ್ಲುವಂತದ್ದು ಅಲ್ಲದೆ ಧನಂಜಯ್, ಪರುಲ್ ಯಾದವ್ ಮತ್ತು ರಘು ಮುಖರ್ಜಿ ತರಹದ ತಾಜಾ ಮುಖಗಳಿವೆ. ಸದ್ಯಕ್ಕೆ ಶಬ್ದ ತಂತ್ರಜ್ಞ ರಾಮಕೃಷ್ಣ ಚೆನ್ನೈನಲ್ಲಿದ್ದು ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಪವನ್.
"ನನಗೆ ಇನ್ನು ಕೇವಲ ೧೫ ದಿನಗಳಷ್ಟೇ ಉಳಿದಿದೆ ಈ ತಿಂಗಳ ಕೊನೆಗೆ ಸಿನೆಮಾ ಬಿಡುಗಡೆ ಮಾಡಲು" ಎನ್ನುತಾರೆ ಪವನ್.
ಅನೂಪ್ ಸೀಳೀನ್ ಸಿನೆಮಾಗೆ ಸಂಗೀತ ನೀಡಿದ್ದು, ಸೋಮಸುಂದರಂ ಸಿನೆಮ್ಯಾಟೋಗ್ರಾಫರ್.
Advertisement