'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಕಥೆ ಹೇಳಲು ೧೦ ಹಾಡುಗಳು

ವಿಶಿಷ್ಟ ಕಥೆಯಷ್ಟೇ ಅಲ್ಲ, ಸಂಗೀತಕ್ಕೆ ಕೂಡ ಹೇಮಂತ್ ರಾವ್ ಅವರ ಚೊಚ್ಚಲ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಮಹತ್ವದ ಪಾತ್ರವಿದೆಯಂತೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಅನಂತನಾಗ್
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಅನಂತನಾಗ್

ಬೆಂಗಳೂರು: ವಿಶಿಷ್ಟ ಕಥೆಯಷ್ಟೇ ಅಲ್ಲ, ಸಂಗೀತಕ್ಕೆ ಕೂಡ ಹೇಮಂತ್ ರಾವ್ ಅವರ ಚೊಚ್ಚಲ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಮಹತ್ವದ ಪಾತ್ರವಿದೆಯಂತೆ. ಮುಂದಿನ ವಾರ ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿರುವ ಚಿತ್ರತಂಡ ಶನಿವಾರ ಒಂದು ಹಾಡನ್ನು ಬಿಡುಗಡೆ ಮಾಡಲಿದೆ. ಈ ಹಾಡನ್ನು ಸಿದ್ಧಾಂತ್ ಹಾಡಿದ್ದು, ರಕ್ಷಿತ್ ಶೆಟ್ಟಿ ಸಾಹಿತ್ಯ ರಚಿಸಿದ್ದಾರೆ.

ಇದು ತಾಜಾ ಹಾಡು ಎನ್ನುವ ನಿರ್ದೇಶಕ "ಕನ್ನಡ ಸಿನೆಮಾ ರಂಗದಲ್ಲಿ ಇದು ಹೊಸ ರೀತಿಯ ಹಾಡು. ಭಾರತೀಯ ಮತ್ತು ಪಶ್ಚಿಮದ ಸಂಗೀತದ ಫ್ಯೂಷನ್ ಇದೆ" ಎಂದಿದ್ದಾರೆ ಹೇಮಂತ್.

ಚರಣ್ ರಾಜ್ ಸಂಗೀತ ನೀಡಿರುವ ಈ ಸಿನೆಮಾದಲ್ಲಿ ಸುಮಾರು ೧೦ ಹಾಡುಗಳಿವೆಯಂತೆ. ಬಹುತೇಕ ಹಾಡುಗಳು ಸಿನೆಮಾ ನಿರೂಪಣೆಯ ಹಿನ್ನಲೆಯಲ್ಲಿ ಮೂಡಿ ಬರಲಿವೆಯಂತೆ. "ಈ ಸಿನೆಮಾದ ಸಂಗೀತದ ವಿಶಿಷ್ಟತೆ ಎಂದರೆ ಎಲ್ಲ ಹಾಡುಗಳು ಕಥೆಯ ಜೊತೆಗೇ ಬರುತ್ತವೆ. ಇವುಗಳು ಹಿನ್ನಲೆ ಸಂಗೀತ ಇದ್ದಂತೆ. ಪ್ರತಿ ಹಾಡುಗಳಿ ೪೦ ಸೆಕಂಡ್ ನಿಂದ ಸುಮಾರು ಒಂದು ನಿಮಿಷದ ಅವಧಿಯವು. ಇಡೀ ಆಲ್ಬಮ್ ನಲ್ಲಿ ತಾಜಾತನವಿದೆ ಎಂದು ವಿವರಿಸುತ್ತಾರೆ" ಹೇಮಂತ್.

ರಾಷ್ಟ್ರಪ್ರಶಸ್ತಿ ವಿಜೇತ 'ಹರಿವು' ಸಿನೆಮಾಗೆ ಕೂಡ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಶೃತಿ ಹರಿಹರನ್ ನಾಯಕ ನಟಿಯಾಗಿದ್ದು, ಅನಂತನಾಗ್, ಅಚ್ಯುತ್ ಕುಮಾರ್ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com