ಧರ್ಮ ಮತ್ತು ಪ್ರೀತಿಯ ಜಿಜ್ಞಾಸೆಯಲ್ಲಿ ಪವನ್ ಒಡೆಯರ್ ಸಿನೆಮಾ

'ಗೋವಿಂದಾಯ ನಮಃ', 'ಗೂಗ್ಲಿ' ಮತ್ತು 'ರಣವಿಕ್ರಮ' ಕಮರ್ಶಿಯಲ್ ಸಿನೆಮಾಗಳನ್ನು ನಿರ್ದೇಶಿಸಿದ ಪವನ್ ಒಡೆಯರ್ ಈಗ ತಮ್ಮ ನಾಲ್ಕನೇ ಸಿನೆಮಾದಲ್ಲಿ ಧರ್ಮ ಮತ್ತು ಪ್ರೀತಿಯ ಜಿಜ್ಞಾಸೆಗೆ ಬಿದ್ದಿದ್ದಾರೆ.
'ಜೆಸ್ಸಿ' ಸಿನೆಮಾದಲ್ಲಿ ಧನಂಜಯ್ ಮತ್ತು ಪರುಲ್ ಯಾದವ್
'ಜೆಸ್ಸಿ' ಸಿನೆಮಾದಲ್ಲಿ ಧನಂಜಯ್ ಮತ್ತು ಪರುಲ್ ಯಾದವ್
Updated on

ಬೆಂಗಳೂರು: 'ಗೋವಿಂದಾಯ ನಮಃ', 'ಗೂಗ್ಲಿ' ಮತ್ತು 'ರಣವಿಕ್ರಮ' ಕಮರ್ಶಿಯಲ್ ಸಿನೆಮಾಗಳನ್ನು ನಿರ್ದೇಶಿಸಿದ ಪವನ್ ಒಡೆಯರ್ ಈಗ ತಮ್ಮ ನಾಲ್ಕನೇ ಸಿನೆಮಾದಲ್ಲಿ ಧರ್ಮ ಮತ್ತು ಪ್ರೀತಿಯ ಜಿಜ್ಞಾಸೆಗೆ ಬಿದ್ದಿದ್ದಾರೆ. ಪಾಶ್ಚಿಮಾತ್ಯವಾಗಿರುವ ವಿಶ್ವದಲ್ಲಿ ಬದುಕಿದ್ದರೂ ಬಿಡಲಾಗದ ನಮ್ಮ ಸಾಂಪ್ರದಾಯಿಕ ಸಂಗತಿಗಳು ಮತ್ತು ಆಚರಣೆಗಳ ಬಗ್ಗೆ ಸಿನೆಮಾ ಮಾತನಾಡಲಿದೆ ಎನ್ನುತ್ತಾರೆ ನಿದೇಶಕ.

"'ಜೆಸ್ಸಿ' ಒಂದು ಸುಂದರ ಅಚ್ಚರಿಯಾಗಲಿದೆ. ನಮ್ಮ ಜೀವನ ಶೈಲಿ ಬದಲಾಗಿದ್ದರು, ನಮ್ಮ ಸಾಂಪ್ರದಾಯಿಕ ಮನಸ್ಸುಗಳು ಬದಲಾಗದೆ ಇರುವುದನ್ನು ಸಿನೆಮಾ ಚರ್ಚಿಸುತ್ತದೆ. ಮತಧರ್ಮದಲ್ಲಿ ನಂಬಿಕೆಯಿಟ್ಟು, ಪ್ರೀತಿಯಲ್ಲಿ ಬೀಳಬಹುದಾದಾಗ ಕೆರಳುವ ಹಲವಾರು ಭಾವನೆಗಳನ್ನು ಸಿನೆಮಾ ಹಿಡಿದಿಡಲಿದೆ" ಎನ್ನುತ್ತಾರೆ ಪವನ್.

ಧರ್ಮದಲ್ಲಿ ಮತ್ತು ಪ್ರೀತಿಯಲ್ಲಿ ಅರಸುವುದೇ ಪಡೆಯುವಿಕೆ ಎನ್ನುತ್ತಾರೆ ಅವರು.

ಈ ಸಿನೆಮಾ ತಮಿಳು ಸಿನೆಮಾದಿಂದ ಸ್ಫೂರ್ತಿ ಪಡೆದಿದೆ ಎಂದು ಒಪ್ಪಿಕೊಳ್ಳುವ ನಿರ್ದೇಶಕ "ನಾನು 'ಗೋವಿಂದಾಯ ನಮಃ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಗ, ಒಂದು ಚರ್ಚ್ ಬಳಿಯಿಂದ ಹೋದೆ. ಅಲ್ಲಿ ಜೀಸಸ್ ನ ವಿಗ್ರಹವಿತ್ತು. ಆಗ ತಾನೇ 'ವಿನ್ನೈತಾಂಡಿ ವರುವಯ' ಬಿಡುಗಡೆಯಾಗಿತ್ತು. ಆ ವಿಗ್ರಹ ಮತ್ತು ಆ ತಮಿಳು ಸಿನೆಮಾದ ಥೀಮ್ ನನಗೆ ಈ ವಿಶಿಷ್ಟ ಸ್ಕ್ರಿಪ್ಟ್ ಪರೆಯಲು ಪ್ರೇರೇಪಿಸಿತು. 'ಜೆಸ್ಸಿ' ಬಸಿರಾದದ್ದು ಹೀಗೆ" ಎನ್ನುತ್ತಾರೆ ನಿರ್ದೇಶಕ.

ಸಿನೆಮಾದ ಪಾತ್ರ ವರ್ಗ ಕಥೆಗೆ ಪೂರಕವಾಗಿದೆ ಎನ್ನುವ ಅವರು "ಧನಂಜಯ್, ಪರುಲ್ ಯಾದವ್ ಮತ್ತು ರಘು ಮುಖರ್ಜಿ ಕನಸಿನ ತಂಡ. ಇವರ ಕೆಮಿಸ್ಟ್ರಿ ಸಿನೆಮಾದಲ್ಲಿ ಚೆನ್ನಾಗಿ ಮೂಡಿ ಬಂದಿದೆ" ಎಂದಿದ್ದಾರೆ.

ಸಿನೆಮಾದ ಒಂದು ಭಾಗ ಕಲ್ಪಿತ ಪ್ರದೇಶ ಮಾಲ್ಗುಡಿಯಲ್ಲಿ ನಡೆಯುತ್ತದೆ. ಈ ಭಾಗವನ್ನು ಊಟಿ, ಚಿಕ್ಕಮಗಳೂರು ಮತ್ತು ಮೂಡಿಗೆರೆಯ ಸುತ್ತಮುತ್ತಲ ಹಸಿರು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. "ನಂತರ ಕಥೆ ಬೆಂಗಳೂರಿಗೆ ಬದಲಾಗುತ್ತದೆ. ಹಾಡುಗಳನ್ನು ಸಿಗಂದೂರಿನ ಹಿನ್ನೀರು ಮತ್ತು ಸಾಥೋಡಿ ಜಲಪಾತಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ" ಎಂದು ಪವನ್ ತಿಳಿಸುತ್ತಾರೆ.

ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದ್ದು, ಅರುಳ್ ಸೋಮಸುಂದರಮ್ ಸಿನೆಮ್ಯಾಟೋಗ್ರಾಫರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com