'ರಾಕೆಟ್' ನಿಂದ ವಠಾರದತ್ತ ಹೊರಳಿದ ಸತೀಶ್

ನಟ ನೀನಾಸಮ್ ಸತೀಶ್ ತಾವೇ ನಿರ್ಮಿಸಿ ನಟಿಸಿದ್ದ 'ರಾಕೆಟ್' ಅಷ್ಟೇನೂ ಯಶಸ್ಸು ಕಾಣಲಿಲ್ಲ. ಈಗ ನಟ 'ಬ್ಯೂಟಿಫುಲ್ ಮನಸುಗಳು' ಸಿನೆಮಾದಲ್ಲಿ ನಿರತರಾಗಿದ್ದು, ಒಂದು
ನಟ ನೀನಾಸಮ್ ಸತೀಶ್
ನಟ ನೀನಾಸಮ್ ಸತೀಶ್
Updated on

ಬೆಂಗಳೂರು: ನಟ ನೀನಾಸಮ್ ಸತೀಶ್ ತಾವೇ ನಿರ್ಮಿಸಿ ನಟಿಸಿದ್ದ 'ರಾಕೆಟ್' ಅಷ್ಟೇನೂ ಯಶಸ್ಸು ಕಾಣಲಿಲ್ಲ. ಈಗ ನಟ 'ಬ್ಯೂಟಿಫುಲ್ ಮನಸುಗಳು' ಸಿನೆಮಾದಲ್ಲಿ ನಿರತರಾಗಿದ್ದು, ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರೆ.

ಜಯತೀರ್ಥ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ, ಲೂಸಿಯಾ ಹುಡುಗಿ ಶೃತಿ ಹರಿಹರನ್ ಮತ್ತೆ ಜೋಡಿಯಾಗಿದ್ದರೆ. ಹಲವಾರು ಪಾತ್ರಗಳನ್ನು ಪ್ರಯೋಗಿಸುತ್ತಿದ್ದ ನಟ ಈ ಸರಳ ಪ್ರೇಮ ಕಥೆಯಲ್ಲಿ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ.

"ಈ ಸಿನೆಮಾ ವಠಾರದಲ್ಲಿ ನಡೆಯುತ್ತದೆ. ಕೆಲವು ಯುವಕರು ಯಾವುದೇ ಕೆಲಸವಿಲ್ಲದ ತಮ್ಮ ಪೋಷಕರ ಮನೆಯಲ್ಲಿ ಉಳಿಯುವುದಕ್ಕೆ ಇಷ್ಟ ಪಡುತ್ತಾರೆ. ನಾನು ಅಂತಹ ಒಂದು ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅವನಿಗೆ ಜೀವನದಲ್ಲಿ ಯಾವುದೇ ಗುರಿಯಿಲ್ಲ. ತನ್ನ ತಂದೆ ತಾಯಿ ದುಡಿದ ದುಡ್ಡನ್ನು ವ್ಯಯಿಸುವುದೇ ಅವನಿಗೆ ಸಂತಸ" ಎನ್ನುತ್ತಾರೆ ನಟ.

ಅಂತಹ ಜನರ ಸುಂದರ ಆಯಾಮವನ್ನು ಈ ಸಿನೆಮಾ ಕಟ್ಟಿಕೊಡುತ್ತದೆ ಮತ್ತು "ಇದು ಒಳ್ಳೆಯನ್ನು ಕೆಟ್ಟದ್ದನ್ನು ಮೀರಿ ಬೆಳೆಯುತ್ತದೆ" ಇನ್ನುತ್ತಾರೆ ಸತೀಶ್.

ಗುರು ದೇಶಪಾಂಡೆ ನಿರ್ದೇಶನದ 'ಪಡ್ಡೆ ಹುಲಿ' ಸಿನೆಮಾ ಕೂಡ ಸತೀಶ್ ಒಪ್ಪಿಕೊಂಡಿದ್ದು, ಈ ಸಿನೆಮಾ ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

"ನಾನು 'ಪಡ್ಡೆ ಹುಲಿ' ಸಿದ್ಧತೆಗಾಗಿ ಕಳೆದ ೩೦ ದಿನಗಳಿಂದ ಜಿಮ್ ಗೆ ಹೋಗುತ್ತಿದ್ದೇನೆ" ಎನ್ನುತ್ತಾರೆ ನಟ.

ಸಿಕ್ಸ್ ಪ್ಯಾಕ್ ದೇಹಕ್ಕಾಗಿ ಇದಲ್ಲ ಎನ್ನುವ ನಟ "ತೆಳುವಿನ ದೇಹಕ್ಕಾಗಿ ಜಿಮ್ ಗೆ ಹೋಗುತ್ತಿದ್ದೇನೆ. ಇದನ್ನು ನಿರ್ದೇಶಕ ಎದುರು ನೋಡುತ್ತಿದ್ದಾರೆ" ಎನ್ನುತ್ತಾರೆ.

ಈ ವರ್ಷ ತೆಲಿಗಿನಲ್ಲೂ ಪಾದಾರ್ಪಣೆ ಮಾಡಲಿದ್ದಾರೆ ಸತೀಶ್. "ನನಗೆ ಎರಡು ಅವಕಾಶಗಳಿವೆ. ಮುಂದಿನ ಎರಡು ವಾರಗಳಲ್ಲಿ ಅದು ಅಂತಿಮವಾಗಲಿದ್ದು, ಮೇನಲ್ಲಿ ಚಿತ್ರೀಕರಣವಾಗುವ ಸಾಧ್ಯತೆ ಇದೆ. ಮುಂದಿನ ವರ್ಷ ತಮಿಳಿನಲ್ಲೂ ಸಿನೆಮಾವೊಂದನ್ನು ಮಾಡಲಿದ್ದೇನೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com