
ಬೆಂಗಳೂರು: ಜಯಪ್ರಕಾಶ್ ರಾಧಾಕೃಷ್ಣ ಅವರ ಇಂಗ್ಲಿಶ್ ಚಲನಚಿತ್ರ 'ಲೆನ್ಸ್' ಈ ವರ್ಷದ ಗೊಲ್ಲಾಪುಡಿ ಶ್ರೀನಿವಾಸ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಹಿಂದಿ, ಮಲಯಾಳಮ್, ಇಂಗ್ಲಿಶ್, ಅಸ್ಸಾಮಿ, ಬೆಂಗಾಲಿ, ತಮಿಳು ಮತ್ತು ಕನ್ನಡ ಭಾಷೆಗಳ ೩೩ ಸಿನೆಮಾಗಳು ಈ ಪ್ರಶಸ್ತಿಗೆ ಸ್ಪರ್ಧಿಸಿದ್ದವು.
ಈ ಪ್ರಶಸ್ತಿ ಆಯ್ಕೆಗೆ ಖ್ಯಾತ ನಿರ್ದೇಶಕರಾದ ಸಂಗೀತಂ ಶ್ರೀನಿವಾಸ ರಾವ್, ವಸಂತ್ ಸಾಯಿ ಮತ್ತು ನಟಿ ರೋಹಿಣಿ ತೀರ್ಪುಗಾರರಾಗಿದ್ದರು. ವಿಭಿನ್ನ ಮೂಲದ ಇಬ್ಬರು ನಡೆಸುವ ಸ್ಕೈಪ್ ಚರ್ಚೆಯಿಂದ, ಹೇಗೆ ಒತ್ತೆಯಾಳಿನ ಪರಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಕಥೆಯನ್ನು ಒಳಗೊಂಡ ಈ ಸಿನೆಮಾದ ನಿರ್ದೇಶಕ ಜಯಪ್ರಾಕಾಶ್ ಅವರ ಚೊಚ್ಚಲ ಚಿತ್ರದಲ್ಲಿ ಅರವಿಂದ್ ನಾಯಕನಟನಾಗಿ ನಟಿಸಿದ್ದರು.
೧೫೦೦೦೦ ರೂ ನಗದು ಮತ್ತು ಫಲಕವುಳ್ಳ ಪ್ರಶಸ್ತಿಯನ್ನು ಆಗಸ್ಟ್ ೧೨ ರಂದು ಪ್ರಧಾನ ಮಾಡಲಾಗುವುದು.
Advertisement