'ಜೆಸ್ಸಿ' ಸಿನೆಮಾದಲ್ಲಿ ವಿಶಿಷ್ಟ ಅವತಾರದಲ್ಲಿ ಪರುಲ್ ಯಾದವ್

ನಟಿ ಪರುಲ್ ಯಾದವ್ ಅವರಿಗೆ ಇದು ಯಶಸ್ವಿ ವರ್ಷ. 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ಬಹು ನಿರೀಕ್ಷಿತ ಸಿನೆಮಾ 'ಜೆಸ್ಸಿ'ಯಲ್ಲಿ ನಾಯಕ ನಟಿಯಾಗಿ
ನಟಿ ಪರುಲ್ ಯಾದವ್
ನಟಿ ಪರುಲ್ ಯಾದವ್
Updated on

ಬೆಂಗಳೂರು: ನಟಿ ಪರುಲ್ ಯಾದವ್ ಅವರಿಗೆ ಇದು ಯಶಸ್ವಿ ವರ್ಷ. 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ಬಹು ನಿರೀಕ್ಷಿತ ಸಿನೆಮಾ 'ಜೆಸ್ಸಿ'ಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಮೂಲದವರಾಗಿದ್ದರೂ, 'ಗೋವಿಂದಾಯ ನಮಃ' ಸಿನೆಮಾದ ಮೂಲಕ ಕನ್ನಡದಲ್ಲಿ ಮನೆಮಾತಾದವರು. ನಂತರ 'ಶಿವಾಜಿನಗರ', 'ಬಚ್ಚನ್', 'ಉಪ್ಪಿ-೨' ಮತ್ತು 'ಆಟಗಾರ' ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡವರು.

ಈಗ 'ಜೆಸ್ಸಿ' ಬಿಡುಗಡೆಗೆ ಸಿದ್ಧವಾಗಿದ್ದು, ಆತ್ಮವಿಶ್ವಾಸದಿಂದಿರುವ ನಟಿ "ಪವನ್ ಅವರು ನನಗೆ 'ಜೆಸ್ಸಿ'ಯಲ್ಲಿ ಪಾತ್ರ ನೀಡಿದಾಗ ನನಗೆ ಬಹಳ ಸಂತಸವಾಯಿತು. ನನಗೆ ಮೊದಲ ದೊಡ್ಡ ಹಿಟ್ ನೀಡಿದ ನಿರ್ದೇಶಕ ಅವರು ಮತ್ತು ಆ ಪಾತ್ರ ಕೂಡ ಬಹಳ ಇಷ್ಟವಾಯಿತು. ಇಂತಹ ಪಾತ್ರವನ್ನು ಬೇರೆ ಯಾವ ನಿರ್ದೇಶಕನೂ ಚಿಂತಿಸಿಲ್ಲ" ಎಂದು ವಿವರಿಸುತ್ತಾರೆ ನಟಿ.

'ಜೆಸ್ಸಿ'ಯಲ್ಲಿ ನಂದಿನಿ ಪಾತ್ರ ನಿರ್ವಹಿಸುತ್ತಿರುವ ಪರುಲ್, ಇದು ತ್ರಿಕೋಣ ಪ್ರೇಮಕಥೆ ಎಂದು ವಿವರಿಸುತ್ತಾರೆ. "ಅವಳು ಹೆಚ್ಚು ಮಾತನಾಡದ ಬ್ರಾಹ್ಮಣ ಹುಡುಗಿ. ಯಾರೂ ಅವಳ ಜೊತೆ ಹರಟೆ ಹೊಡೆಯಲು ಇಚ್ಚಿಸುವುದಿಲ್ಲ ಆದರೆ ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡುವಂತಹ ಹುಡುಗಿ. ನನ್ನಂತೆಯೇ ನೈಜ ಪಾತ್ರವದು. ಅವಳು ಪೋಷಕರನ್ನು ಪ್ರೀತಿಸುತ್ತಾಳೆ, ಯಾವುದೇ ತರಲೆ ಇಷ್ಟಪಡದವಳು. ಅದಕ್ಕೆ ನನಗೆ ಈ ಪಾತ್ರ ನಿರ್ವಹಿಸುವುದಲ್ಲಿ ಯಾವುದೇ ತೊಂದರೆಯಾಗಲಿಲ್ಲ" ಎಂದು ವಿವರಿಸುತ್ತಾರೆ.

ಜನ ಈ ಪಾತ್ರವನ್ನು ಹೆಚ್ಚು ಇಷ್ಟಪಟ್ಟು ತಮಗೆ ಇನ್ನೂ ಹೆಚ್ಚಿನ ರೊಮ್ಯಾಂಟಿಕ್ ಪಾತ್ರಗಳು ಸಿಗಲಿವೆ ಎಂಬ ನಿರೀಕ್ಷೆಯಲ್ಲಿದ್ದಾರೆ ಪರುಲ್. "ಅದಕ್ಕೆ ಈ ವರ್ಷ ಬೇರೆ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ನಾನು ಏಳು ಸಿನೆಮಾಗಳನ್ನು ಮಾಡಿದ್ದೇನೆ ಮತ್ತು ಎಲ್ಲದರಲ್ಲೂ ನನ್ನ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ. ನಾನು ಒಳ್ಳೆಯ ನಟಿ ಎಂಬ ಭರವಸೆ ತುಂಬಲು ಕನ್ನಡ ಪ್ರೇಕ್ಷಕರು ಎಂದಿಗೂ ನನ್ನನ್ನು ಸಹಕರಿಸಿದ್ದಾರೆ. ಈಗ ಅದನ್ನು ಉಳಿಸಿಕೊಳ್ಳುವುದು ಮುಖ್ಯ. ಈಗ ಉತ್ತಮ ವಿಷಯಗಳುಳ್ಳ ಸಿನೆಮಾಗಳನ್ನು ಎದುರುನೋಡುತಿದ್ದೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com