ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ ಪುಸ್ತಕಕ್ಕೆ 'ಸ್ವರ್ಣಕಮಲ' ಪ್ರಶಸ್ತಿ

ಸ್ಯಾಂಡಲ್ ವುಡ್ ಚಿತ್ರರಂಗದ ದಂತಕಥೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ ಸಮಗ್ರ ಚರಿತ್ರೆ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ....
ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ
ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ

ನವದೆಹಲಿ: ಸ್ಯಾಂಡಲ್ ವುಡ್ ಚಿತ್ರರಂಗದ ದಂತಕಥೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ ಸಮಗ್ರ ಚರಿತ್ರೆ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ.

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು,
ದೊಡ್ಡಹುಲ್ಲೂರು ರುಕ್ಕೋಜಿ ಅವರು ಬರೆದಿರುವ ಡಾ. ರಾಜಕುಮಾರ್ ಸಮಗ್ರ ಚರಿತ್ರೆ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ 75 ಸಾವಿರ ಮೊತ್ತದ ಬಹುಮಾನವನ್ನು ಒಳಗೊಂಡಿದೆ.

ಈ ಪುಸ್ತಕವನ್ನು ಪ್ರೀತಿ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಈ ಪುಸ್ತಕ ರೂಪುಗೊಳ್ಳಲು ದೊಡ್ಡಹುಲ್ಲೂರು ರುಕ್ಕೋಜಿ ಅವರು ಸತತ 15 ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. 2 ಸಂಪುಟಗಳನ್ನು ಒಳಗೊಂಡಿರುವ ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ ಪುಸ್ತಕ ಪ್ರಕಟಣೆಗೆ ಅಂದಾಜು ರು. 87 ಲಕ್ಷ ವೆಚ್ಚವಾಗಿದೆ.

1ನೇ ಸಂಪುಟ ಸುಮಾರು 1080 ಪುಟಗಳನ್ನು ಒಳಗೊಂಡಿದ್ದರೆ, 2ನೇ ಸಂಪುಟ 1060 ಪುಟಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com