ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಿಥಿ ಚಿತ್ರದ ಪೋಸ್ಟರ್ ಗಳು
ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಿಥಿ ಚಿತ್ರದ ಪೋಸ್ಟರ್ ಗಳು

ತಿಥಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ಚಿತ್ರದ ನಿರ್ದೇಶಕ

ತಿಥಿ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ನಿರ್ದೇಶಕ ರಾಮ್ ರೆಡ್ಡಿ...
ಬೆಂಗಳೂರು: ತಿಥಿ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ನಿರ್ದೇಶಕ ರಾಮ್ ರೆಡ್ಡಿ ಹೇಳಿದ್ದಾರೆ. 
63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ 'ತಿಥಿ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. 
ಈ ಕುರಿತು ಪ್ರತಿಕ್ರಯಿಸಿದ ರಾಮ್ ರೆಡ್ಡಿ, ನಮ್ಮ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರುತ್ತದೆ ಎಂದು ನೀರಿಕ್ಷಿಸಿರಲಿಲ್ಲ. ಏಕೆಂದರೆ, ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಯಶಸ್ಸು ಕಂಡ ಚಿತ್ರಗಳೇ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ. ಇವುಗಳ ನಡುವೆ ತಿಥಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ವೃತ್ತಿಪರ ನಟರಲ್ಲದವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರೀಕರಣ ಮುಗಿಸಲು ಮೂರು ವರ್ಷವಾಯಿತು. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ತಿಥಿ ಚಿತ್ರವನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರು, ರಾಷ್ಟ್ರಾದ್ಯಂತ ಬಿಡುಗಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 
ಬೆಂಗಳೂರಿನ ನಿರ್ದೇಶಕ ರಾಮ್‌ರೆಡ್ಡಿ  ಅವರ ಚೊಚ್ಚಲ ಚಲನಚಿತ್ರವಾಗಿದೆ ತಿಥಿ. ಈ ಹಿಂದೆ ಲೊಕೆರ್ನೋ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಿಥಿ ಚಿತ್ರ ಗೋಲ್ಡನ್ ಲಿಯೊಪರ್ಡ್ , ಫಿಲ್ಮ್  ಮೇಕರ್ಸ್  ಆಫ್ ದ ಪ್ರೆಸೆಂಟ್ ಕಾಂಪಿಟೇಷನ್ ಮತ್ತು ದ ಸ್ವಚ್ ಫಸ್ಟ್ ಫೀಚರ್ ಅವಾರ್ಡ್‌ಗಳನ್ನು ಗಳಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com