'ಅಲ್ಲಮ ಪ್ರಭು' ಸಿನೆಮಾಗೆ ಬಾಪು ಪದ್ಮನಾಭ ಸಂಗೀತ

ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನಾಧಾರಿತ ಸಿನೆಮಾ ಮಾಡುವಾಗ, ಸಿನೆಮಾದ ಸಂಗೀತದ ಬಗ್ಗೆ ವಿಶೇಷ ಆಸ್ತೆ ವಹಿಸುವುದು ಅತಿ ಅವಶ್ಯಕ. ಇದಕ್ಕಾಗಿಯೇ ನಿರ್ದೇಶಕ ನಾಗಾಭರಣ
ಅಲ್ಲಮನ ಪಾತ್ರದಲ್ಲಿ ನಟ ಧನಂಜಯ್
ಅಲ್ಲಮನ ಪಾತ್ರದಲ್ಲಿ ನಟ ಧನಂಜಯ್

ಬೆಂಗಳೂರು: ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನಾಧಾರಿತ ಸಿನೆಮಾ ಮಾಡುವಾಗ, ಸಿನೆಮಾದ ಸಂಗೀತದ ಬಗ್ಗೆ ವಿಶೇಷ ಆಸ್ತೆ ವಹಿಸುವುದು ಅತಿ ಅವಶ್ಯಕ. ಇದಕ್ಕಾಗಿಯೇ ನಿರ್ದೇಶಕ ನಾಗಾಭರಣ ಖ್ಯಾತ ಹಿಂದುಸ್ತಾನಿ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ ಬಾಪು ಪದ್ಮನಾಭ ಅಲಿಯಾಸ್ ಕೊಳಲು ಬಾಪು ಅವರನ್ನು 'ಅಲ್ಲಮ'ನಿಗಾಗಿ ಸಂಗೀತ ನೀಡಲು ಆಯ್ಕೆ ಮಾಡಿದ್ದಾರೆ.

ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ ಈ ಸಿನೆಮಾದ ಸಂಗೀತಕ್ಕೆ ಅರ್ಧ ವರ್ಷದ ಕಾಲ ದುಡಿದಿದೆಯಂತೆ. ಆ ಸಿನೆಮಾ ಆಲ್ಬಮ್ ನಲ್ಲಿ ೮ ಹಾಡುಗಳು ಮತ್ತು ೧೮ ವಚನಗಳು ಇರಲಿವೆಯಂತೆ. ಇದರ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ "ಅಲ್ಲಮನ ವಚನಗಳನ್ನು ಓದಿ ಬೆರಗಾದೆ. ನಾಗಾಭರಣ ನನ್ನನರಸಿ ಬಂದಾಗ, ಧ್ಯಾನಕ್ಕಾಗಿ ಸಂಗೀತ ಕಂಪೋಸ್ ಮಾಡಲು ನಾನು ಹಿಮಾಲಯದಲ್ಲಿದ್ದೆ" ಎಂದು ವಿವರಿಸುತ್ತಾರೆ ಬಾಪು.

ದಾವಣಗೆರೆಯ ಹರಿಹರದವರಾದ ಬಾಪು ತಮ್ಮ ೧೮ನೆಯ ವಯಸ್ಸಿನಿಂದಲೇ ಸಂಗೀತ ಪ್ರಯಾಣ ಆರಂಭಿಸಿ, ೧೯೯೯ರಿಂದ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯರಾದರಂತೆ. ಈಗ ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ಸಿನೆಮಾದ ಹಾಡುಗಳನ್ನು ಶಂಕರ್ ಮಹದೇವನ್, ರಾಜೇಶ್ ಕೃಷ್ಣನ್, ಹೇಮಂತ್, ಗಣೇಶ್ ದೇಸಾಯಿ, ಸಂಗೀತಾ ಕಟ್ಟಿ, ಮಂಜುಳಾ ಗುರುರಾಜ್, ತೇಜಸ್ವಿನಿ ಎಂ ಕೆ ಮೊದಲಾದವರು ಹಾಡಿದ್ದಾರಂತೆ. "ನಾನು ಕೂಡ ಒಂದು ಹಾಡು ಹಾಡಿದ್ದೇನೆ" ಎನ್ನುತ್ತಾರೆ ಬಾಪು.

ಸಿನೆಮಾದಲ್ಲಿ ಅಲ್ಲಮನ ಪಾತ್ರದಲ್ಲಿ ಧನಂಜಯ್, ಹಾಗು ಬಸವಣ್ಣನ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ.

ಹರಿ ಕೋಡೆ ನಿರ್ಮಿಸಿರುವ ಈ ಸಿನೆಮಾದ ಸಂಗೀತದ ಆಲ್ಬಂ ಇದು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com