ಅನಿರುಧ್ ಸಿನೆಮಾದಲ್ಲಿ ಮತ್ತೆ ತೆರೆಯ ಮೇಲೆ ಮೂಡಲಿರುವ ವಿಷ್ಣು-ಭಾರತಿ ಜೋಡಿ

ದಿವಂಗತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ತಮ್ಮ ಮುಂದಿನ ಸಿನೆಮಾ 'ರಾಜಾ ಸಿಂಹ'ದ ಗುರುವಾರದ ಮುಹೂರ್ತಕ್ಕೆ ಸಿದ್ಧರಾಗುತ್ತಿದ್ದಾರೆ.
ದಿವಂಗತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್
ದಿವಂಗತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್

ಬೆಂಗಳೂರು: ದಿವಂಗತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ತಮ್ಮ ಮುಂದಿನ ಸಿನೆಮಾ 'ರಾಜಾ ಸಿಂಹ'ದ ಗುರುವಾರದ ಮುಹೂರ್ತಕ್ಕೆ ಸಿದ್ಧರಾಗುತ್ತಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ "ಈ ಸಿನೆಮಾ ವಿಶೇಷ ಏಕೆಂದರೆ ಅಪ್ಪ ಅಮ್ಮ (ವಿಷ್ಣುವರ್ಧನ್ ಮತ್ತು ಭಾರತಿ) ೩೬ ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆಯಿಂದ ಅಪ್ಪನವರನ್ನು ತೆರೆಯ ಮೇಲೆ ತರಲು ಸಾಧ್ಯವಾಗುತ್ತಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಇವರಿಬ್ಬರ ಜೊತೆಗೆ ನಾನು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನಗೆ ಹೆಮ್ಮೆಯ ಸಮಯ" ಎನ್ನುತ್ತಾರೆ ಅನಿರುಧ್.

ಆಕ್ಷನ್ ಹೀರೋ ಪಾತ್ರದಲ್ಲಿ ನಟಿಸುತ್ತಿರುವ ಅನಿರುಧ್ "ಅಪ್ಪನವರ ಎಲ್ಲ ಸಿನೆಮಾಗಳಂತೆ 'ರಾಜ ಸಿಂಹ' ಕೂಡ ಸಂದೇಶಭರಿತ ಸಿನೆಮಾ. ಇದು ಹಳ್ಳಿಯಲ್ಲಿ ನಡೆಯಲಿರುವ ಕುಟುಂಬ ಡ್ರಾಮಾ. ಇದು ಇತ್ತೀಚಿನ ಸಿನೆಮಾಗಳಲ್ಲಿ ವಿರಳವಾಗಿದೆ" ಎನ್ನುತ್ತಾರೆ ನಟ.

ಇಂದು ಋಣಾತ್ಮಕತೆಯೇ ಹೆಚ್ಚು ಪ್ರಚಾರ ಪಡೆಯುತ್ತದೆ ನ್ನುವ ಅವರು "ಅಪರಾಧಕ್ಕೆ ಸಂಬಂಧಿಸಿದ ಚಿತ್ರಗಳು ಹೆಚ್ಚು ಚರ್ಚೆಗೆ ಒಳಗಾಗುತ್ತವೆ. ಕುಟುಂಬ ಐಕ್ಯತೆಯ ವಿಷಯಗಳಿಗೆ ಕಡಿಮೆ ಮಾನ್ಯತೆ ನೀಡಲಾಗುತ್ತದೆ ಇದು ಮುಂದಿನ ಪೀಳಿಗೆಗೆ ಒಳ್ಳೆಯದಲ್ಲ" ಎನ್ನುತ್ತಾರೆ ಅನಿರುಧ್.

ಸಿ ಡಿ ಬಸಪ್ಪ ಈ ಸಿನೆಮಾ ನಿರ್ಮಿಸುತ್ತಿದ್ದು ರವಿ ರಾಮ್ ನಿರ್ದೇಶಕ. ಈ ಸಿನೆಮಾಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಪುನೀತ್ ರಾಜಕುಮಾರ್ ಕ್ಲ್ಯಾಪ್ ಮಾಡಲಿದ್ದಾರೆ ಮತ್ತು ಕೀರ್ತಿ ವಿಷ್ಣುವರ್ಧನ್ ಕ್ಯಾಮರಾಗೆ ಚಾಲನೆ ನೀಡಲಿದ್ದಾರೆ.

ನಿಕಿತಾ ತುಕ್ರಾಲ್ ನಾಯಕ ನಟಿಯಾಗಿದ್ದು, ಶರತ್ ಲೋಹಿತಾಶ್ವ, ಅರುಣ್ ಸಾಗರ್ ಮತ್ತು ಬುಲೆಟ್ ಪ್ರಕಾಶ್ ಕೂಡ ನಟಿಸುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಕೆ ಎಂ ವಿಷ್ಣುವರ್ಧನ್ ಸಿನೆಮ್ಯಾಟೋಗ್ರಾಫರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com