'ಮಮ್ಮಿ- ಸೇವ್ ಮಿ'ಗೆ ಡಬ್ ಮಾಡಿ ಮುಗಿಸಿದ ಪುಟಾಣಿ ಯುವಿನ

ಎಂಟು ವರ್ಷದ ಯುವಿನಾ ಪಾರ್ಥವಿ ಕನ್ನಡ ಚಿತ್ರೋದ್ಯಮದಲ್ಲಿ ನೆಚ್ಚಿನ ಬಾಲನಟಿಯಾಗಿದ್ದಾರೆ. ಚೆನ್ನೈ ನಲ್ಲಿ ತನ್ನ ಪೋಷಕರ ಜೊತೆಗೆ ಮನೆಯಲ್ಲಿ ತೆಲುಗು ಮಾತನಾಡುವ ಯುವಿನಾ
ಬಾಲನಟಿ ಯುವಿನಾ ಪಾರ್ಥವಿ
ಬಾಲನಟಿ ಯುವಿನಾ ಪಾರ್ಥವಿ

ಬೆಂಗಳೂರು: ಎಂಟು ವರ್ಷದ ಯುವಿನಾ ಪಾರ್ಥವಿ ಕನ್ನಡ ಚಿತ್ರೋದ್ಯಮದಲ್ಲಿ ನೆಚ್ಚಿನ ಬಾಲನಟಿಯಾಗಿದ್ದಾರೆ. ಚೆನ್ನೈ ನಲ್ಲಿ ತನ್ನ ಪೋಷಕರ ಜೊತೆಗೆ ಮನೆಯಲ್ಲಿ ತೆಲುಗು ಮಾತನಾಡುವ ಯುವಿನಾ ಆತ್ಮವಿಶ್ವಾಸದಿಂದ ಕನ್ನಡ ಸಿನೆಮಾ 'ಮಮ್ಮಿ- ಸೇವ್ ಮಿ'ಗೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.

ನಿರ್ದೇಶಕ ಲೋಹಿತ್ ಹೇಳುವಂತೆ ಪುಟ್ಟಿ ಯುವಿನಾ ಮೂರು ದಿನಗಳಲ್ಲಿ ಸಿನೆಮಾಗೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರಂತೆ. "ಅವರು ಭಾಷೆ ಕಲಿಯಲು ಯಾವುದೇ ತರಗತಿಗಳನ್ನು ತೆಗೆದುಕೊಳ್ಳಲಿಲ್ಲ. ಅವರು ಸೆಟ್ಸ್ ನಲ್ಲಿ ನಮ್ಮ ಜೊತೆ ಕನ್ನಡ ಮಾತನಾಡುತ್ತಲೇ ಭಾಷೆ ಕಲಿತುಬಿಟ್ಟಳು. ಉಚ್ಛಾರಣೆಯನ್ನು ಮತ್ತೆ ಮತ್ತೆ ಅಭ್ಯಯಿಸಿ ಎಲ್ಲ ಮೂಲಪಾಠಗಳನ್ನೂ ಕಲಿತುಬಿಟ್ಟಳು" ಎಂದು ವಿವರಿಸುತ್ತಾರೆ.

ಈ ಪ್ರತಿಭಾನ್ವಿತ ನಟಿ ಎಷ್ಟು ಚೆನ್ನಾಗಿ ನಟಿಸುತ್ತಾಳೋ ಅಷ್ಟೇ ಚೆನ್ನಾಗಿ ಅದನ್ನು ಡಬ್ಬಿಂಗ್ ಸಮಯದಲ್ಲಿ ಮರುಸೃಷ್ಟಿಸುತ್ತಾಳೆ ಎನ್ನುವ ನಿರ್ದೇಶಕ "ನಮಗೆ ಎಷ್ಟು ಥ್ರಿಲ್ ಆಯಿತೆಂದರೆ ಅವಳು ಡಬ್ ಮಾಡುವುದನ್ನು ಕೂಡ ಚಿತ್ರೀಕರಣ ಮಾಡಿದೆವು" ಎನ್ನುತ್ತಾರೆ.

ಈಗ ಚಿತ್ರೀಕರಣ ಸಂಪೂರ್ಣವಾಗಿದ್ದು, ವಿಶೇಷ ಎಫೆಕ್ಟ್ಸ್ ಕೆಲಸ ನಡೆಯುತ್ತಿದೆಯಂತೆ. "'ಚಕ್ರವ್ಯೂಹ ಸಿನೆಮಾದ ಜೊತೆಗೆ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ಸಿನೆಮಾ ಮೇ ಅಥವಾ ಜೂನ್ ನಲ್ಲಿ ಬಿಡುಗಡೆಯಾಗಲಿದೆ" ಎಂದು ವಿವರಿಸುತ್ತಾರೆ ಲೋಹಿತ್.

ರವಿ ಕುಮಾರ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com