ಪಂಚತಂತ್ರ, ವಿಕ್ರಮ-ಬೇತಾಳ ಕಥೆಗಳು ಈಗ ಆಪ್ ರೂಪದಲ್ಲಿ!

ಜನಪ್ರಿಯ ಭಾರತೀಯ ಕಥಾ ಜಗತ್ತಿಗೆ ಮಕ್ಕಳು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಪಂಚತಂತ್ರ, ವಿಕ್ರಮ-ಬೇತಾಳ, ಮಾಲ್ಗುಡಿ ದಿನಗಳು ಮತ್ತಿತರ ಕಥೆಗಳ ವಿಡಿಯೋ ಮನರಂಜನಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜನಪ್ರಿಯ ಭಾರತೀಯ ಕಥಾ ಜಗತ್ತಿಗೆ ಮಕ್ಕಳು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಪಂಚತಂತ್ರ, ವಿಕ್ರಮ-ಬೇತಾಳ, ಮಾಲ್ಗುಡಿ ದಿನಗಳು ಮತ್ತಿತರ ಕಥೆಗಳ ವಿಡಿಯೋ ಮನರಂಜನಾ ಆಪ್  ನೆಕ್ಸ್ಟ್ ಜಿಟಿವಿ ಕಿಡ್ಸ್ ನನ್ನು ನೆಕ್ಸ್ಟ್ ಜಿಟಿವಿ ಸೋಮವಾರ ಬಿಡುಗಡೆ ಮಾಡಿದೆ.

ಈ ಅದ್ಭುತ ಮತ್ತು ರಂಜಿತ ಕಥೆಗಳು ಮತ್ತು ಪಾತ್ರಗಳಲ್ಲಿ ಮಕ್ಕಳು ಕಳೆದು ಹೋಗಲು ಮತ್ತಷ್ಟೇ ಅಲ್ಲದೆ ಅವರು ಬೆಳೆದಂತೆ ಆರೋಗ್ಯಕರ ವೈಚಾರಿಕ ಪರಿಸರ ಅವರ ಸುತ್ತ ಸೃಷ್ಟಿಸಲು ಈ ಆಪ್ ಸಹಕಾರಿಯಾಗಲಿದೆ ಎಂದು ನೆಕ್ಸ್ಟ್ ಜಿಟಿವಿ ತಿಳಿಸಿದೆ.

"ಈ ಆಪ್ ನ ಕಾರ್ಯಕ್ರಮಗಳನ್ನು ಮತ್ತು ಮನರಂಜನೆಯನ್ನು ಬಹಳ ಯೋಚಿಸಿ ಆರಿಸಿದ್ದೇವೆ. ಮಕ್ಕಳಿಗೆ ಕಲಿಯಲು ಮತ್ತು ಮನರಂಜಿಸಲು ಇವು ಪ್ರೇರೇಪಿಸುತ್ತವೆ. ಯಾವುದೇ ಜಾಹೀರಾತು ಇಲ್ಲದ, ಅಡಚಣೆ ಇಲ್ಲದ ಸುರಕ್ಷಿತ ಪರಿಸರದಲ್ಲಿ ಮಕ್ಕಳು ಈ ಕಾರ್ಯಕ್ರಮಗಳನ್ನು ಸವಿಯಬಹುದಾಗಿದೆ. ಮಕ್ಕಳು ಒಳ್ಳೆಯ ಪರಿಸರದಲ್ಲಿ ಇವುಗಳನ್ನು ನೋಡುತ್ತಾರೆ ಎಂದು ಪೋಷಕರು ನೆಮ್ಮದಿಯಿಂದರಬಹುದು" ಎಂದು ನೆಕ್ಸ್ಟ್ ಜಿಟಿವಿ ಸಿ ಒ ಒ ಅಭೇಶ್ ವರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಂಡ್ರ್ಯಾಡ್ ಫೋನ್ ಗಳ 'ಗೂಗಲ್ ಪ್ಲೇ' ಮತ್ತು ಆಪಲ್ ಫೋನ್ ಗಳ 'ಐ ಟ್ಯೂನ್ಸ್' ನಲ್ಲಿ ಈ ಆಪ್ ಅಳಭ್ಯವಿದೆ.

ಅಲ್ಲದೆ ಕಾರ್ಟೂನ್ ನೆಟ್ವರ್ಕ್ ಮತ್ತು ಪೋಗೋ ಅಂತಹ ವಾಹಿನಿಗಳನ್ನು ನೇರಪ್ರಸಾರದಲ್ಲಿ ನೋಡುವ ಅವಕಾಶವನ್ನೂ ಆಪ್ ಒದಗಿಸಿಕೊಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com