ವಿನಯ್ ರಾಜಕುಮಾರ್ ಹುಟ್ಟುಹಬ್ಬದ ದಿನ 'ರನ್ ಆಂಟನಿ' ಆಡಿಯೋ ಬಿಡುಗಡೆ

'ಸಿದ್ಧಾರ್ಥ' ಸಿನೆಮಾ ನಿರೀಕ್ಷಿತ ಯಯಸ್ಸು ತಂದುಕೊಡುವುದರಲ್ಲಿ ವಿಫಲವಾದ ನಂತರ ಈಗ 'ರನ್ ಆಂಟನಿ' ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ರಾಜಕುಮಾರ್ ಅಭಿಮಾನಿಗಳಲ್ಲಿ ನಿರೀಕ್ಷೆ
ವಿನಯ್ ರಾಜಕುಮಾರ್
ವಿನಯ್ ರಾಜಕುಮಾರ್

ಬೆಂಗಳೂರು: 'ಸಿದ್ಧಾರ್ಥ' ಸಿನೆಮಾ ನಿರೀಕ್ಷಿತ ಯಯಸ್ಸು ತಂದುಕೊಡುವುದರಲ್ಲಿ ವಿಫಲವಾದ ನಂತರ ಈಗ 'ರನ್ ಆಂಟನಿ' ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ರಾಜಕುಮಾರ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ. ಅವರ ಹುಟ್ಟುಹಬ್ಬವಾದ ಮೇ ೭ ರಂದು ಈ ಹೊಸ ಸಿನೆಮಾದ ಆಡಿಯೋ ಬಿಡುಗಡೆಯಾಗಲಿದೆ.

ರಘು ಶಾಸ್ತ್ರಿ ನಿರ್ದೇಶಿಸಿರುವ 'ರನ್ ಆಂಟನಿ' ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

ಈ ಥ್ರಿಲ್ಲರ್ ಸಿನೆಮಾ ಕಥೆಗೆ ಸಂಗೀತ ಹೇಗೆ ಬೆಸೆದುಕೊಂಡಿಗೆ ಎಂದು ನಿರ್ದೇಶಕ ವಿವರಿಸುವುದು ಹೀಗೆ "ನಾನು 'ರನ್ ಆಂಟನಿ' ಪ್ರಾರಂಭಿಸಿದಾಗ ಮೊದಲಿಗೆ ಕಥೆ ಮತ್ತು ಸಂಗೀತ ಸಮಾನಾಂತರ ಟ್ರ್ಯಾಕ್ ಗಳಲ್ಲಿ ಚಲಿಸುತ್ತಿದೆ ಎಂದುಕೊಂಡಿದ್ದೆ. ಮಣಿಕಾಂತ್ ಸೃಷ್ಟಿಸಿದ್ದ ಹಾಡುಗಳೇ ಕಥೆ ಹೇಳುತ್ತಿದ್ದವು. ಆದುದರಿಂದ ವಿಶಿಷ್ಟವಾದುದನ್ನು ಮಾಡಲು ನಿಶ್ಚಯಿಸಿದೆವು. ಸೂಫಿ ಸಂಗೀತ, ಮತ್ತು ವಿಭಿನ್ನ ರೀತಿಯ ಟ್ಯೂನ್ ಗಳನ್ನು ಒಳಗೊಳ್ಳುವ ಸಾಧ್ಯತೆಯನ್ನು ಸಂಗೀತ ನಿರ್ದೇಶಕರೊಂದಿಗೆ ಚರ್ಚಿಸಿ ಇಲ್ಲಿಗೆ ಬಂದಿಳಿದಿದ್ದೇವೆ" ಎನ್ನುತ್ತಾರೆ.

ಥ್ರಿಲ್ಲರ್ ಸಿನೆಮಾಗ ಮಣಿಕಾಂತ್ ಮೊದಲ ಬಾರಿಗೆ ಸಂಗೀತ ನೀಡಿದ್ದು ಅವರ ಕೈಮೀರಿ ಅತ್ಯುತ್ತಮ ಸಂಗೀತ ನೀಡಿದ್ದಾರೆ ಎಂದು ವಿವರಿಸುತ್ತಾರೆ ರಘು. "ಒಂದು ಕನಸಿನ ರೀತಿಯ ಹಾಡನ್ನು ಬಿಟ್ಟರೆ ಇನ್ನೆಲ್ಲವೂ ಕಥೆಯ ಜೊತೆಗೆ ಮಿಳಿತವಾಗಿರುವುವೇ" ಎನ್ನುತ್ತಾರೆ.

ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿರುವ ಈ ಸಿನೆಮಾದ ಮೊದಲ ಪ್ರತಿಯನ್ನು ಪಡೆಯಲು ರಘು ಶಾಸ್ತ್ರಿ ಹಗಲಿರುಳು ಶ್ರಮಿಸುತ್ತಿದ್ದಾರಂತೆ. ವಿನಯ್ ಜೊತೆಗೆ ರುಕ್ಷರ್ ಮೀರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುಶ್ಮಿತಾ ಮತ್ತು ದೇವರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮನೋಹರ್ ಜೋಶಿಯವರದ್ದು ಸಿನೆಮ್ಯಾಟೋಗ್ರಫಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com