
ಬೆಂಗಳೂರು: ಶ್ರೀನಿವಾಸ್ ರಾಜು ಅವರ ನಿರ್ದೇಶನದ ಪಯಣದಲ್ಲಿ ವಿವಾದಗಳು ಹೊಸದೇನಲ್ಲ. ಸದ್ಯಕ್ಕೆ ಅವರ ನಿರ್ದೇಶನದ 'ದಂಡುಪಾಳ್ಯ-೨' ಸಿನೆಮಾದ ಚಿತ್ರೀಕರಣಕ್ಕೆ ನಗರ ಸಿವಿಲ್ ನ್ಯಾಯಾಲಯ ತಡೆ ನೀಡಿದ್ದರು, ಚಿತ್ರೀಕರಣ ಮುಂದುವರೆಸುವುದಾಗಿ ರಾಜು ತಿಳಿಸಿದ್ದಾರೆ.
ಮೂರನೇ ಹಂತದ ಚಿತ್ರೀಕರಣ ಮೇ ೯ ರಿಂದ ಪ್ರಾರಂಭವಾಗಲಿದೆಯಂತೆ. "ಜನ ನನ್ನನ್ನು ಸುಲಭವಾಗಿ ಪರಿಗಣಿಸಿದ್ದಾರೆ ಆದರೆ ಅದರ ಹೊರತಾಗಿಯೂ ಕೆಲಸ ಮಾಡುವುದು ನನಗೆ ಗೊತ್ತು" ಎನ್ನುವ ಅವರು "ಆದರೆ ಚಿತ್ರೀಕರಣ ನಡೆಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಾನೂನು ವಿಷಯಗಳನ್ನು ನನ್ನ ವಕೀಲ ನೋಡಿಕೊಳ್ಳುತ್ತಾರೆ. ಸೃಜನಶೀಲ ಕೆಲಸ ಮಾಡಲಷ್ಟೇ ನನಗೆ ಶಕ್ತಿ ಇರುವುದು" ಎನ್ನುತ್ತಾರೆ ರಾಜು.
ಈಗ ಬದುಕಿರುವ ಆರು ಜನ ದಂಡುಪಾಳ್ಯ ಗ್ಯಾಂಗ್ ನವರು ಇನ್ನೂ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಿನೆಮಾ ಚಿತ್ರೀಕರಣಕ್ಕೆ ತಡೆ ನಿಡುವಂತೆ ಕೋರ್ಟ್ ಗೆ ಕೋರಿದ್ದರು. "ನಾನು ಅವರ ಒಪ್ಪಿಗೆ ಇಲ್ಲದೆ ಸಿನೆಮಾ ಮಾಡುತ್ತಿದ್ದೇನೆ ಮತ್ತು ಅವರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುತ್ತಿದ್ದೇನೆ ಆದುದರಿಂದ ಅವರ ಪ್ರಕರಣಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಅವರ ವಾದ" ಎನ್ನುವ ನಿರ್ದೇಶಕ "ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನುತ್ತಾರೆ. ನನ್ನ ಸಿನೆಮಾದ ವಿಷಯವಾಗಲಿ ಪಾತ್ರಗಳಾಗಲೀ ಅವರಿಗೆ ತಿಳಿದಿಲ್ಲ. ದಂಡುಪಾಳ್ಯ ಎಂದು ಹೆಸರಿಟ್ಟಾಕ್ಷಣ ಈ ಸಿನೆಮಾ ಸಂಪೂರ್ಣ ಅವರ ಬಗ್ಗೆ ಎಂದು ತಿಳಿಯುವುದು ತಪ್ಪು" ಎನ್ನುತ್ತಾರೆ ನಿರ್ದೇಶಕ.
ಈ ಚಿತ್ರದಲ್ಲಿ ಪೂಜಾ ಗಾಂಧಿ, ಶೃತಿ, ಮಾರ್ಕಂಡ ದೇಶಪಾಂಡೆ, ಕರಿ ಸುಬ್ಬು ಮತ್ತು ರವಿ ಕಾಳೆ ನಟಿಸುತ್ತಿದ್ದಾರೆ.
Advertisement