ನಾನು ಚನ್ನಾಗಿದ್ದೇನೆ; ಸಾವಿನ ಸುದ್ದಿ ಸುಳ್ಳು: ಹಿರಿಯ ಹಾಸ್ಯನಟ ಸೆಂಥಿಲ್

ತಮಿಳಿನ ಖ್ಯಾತ ಹಾಸ್ಯನಟ ಸೆಂಥಿಲ್ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ನಾನು ಮೃತಪಟ್ಟಿಲ್ಲ, ಚನ್ನಾಗಿದ್ದೇನೆ ಎಂದು ಸ್ವತಃ ಸೆಂಥಿಲ್ ಅವರೇ ವಿಡಿಯೋ...
ತಮಿಳಿನಿ ಹಿರಿಯ ಹಾಸ್ಯನಟ ಸೆಂಥಿಲ್
ತಮಿಳಿನಿ ಹಿರಿಯ ಹಾಸ್ಯನಟ ಸೆಂಥಿಲ್

ಚೆನ್ನೈ: ತಮಿಳಿನ ಖ್ಯಾತ ಹಾಸ್ಯನಟ ಸೆಂಥಿಲ್ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ನಾನು ಮೃತಪಟ್ಟಿಲ್ಲ, ಚನ್ನಾಗಿದ್ದೇನೆ ಎಂದು ಸ್ವತಃ ಸೆಂಥಿಲ್ ಅವರೇ ವಿಡಿಯೋ ಸಂದೇಶ ನೀಡುವುದರ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ 65 ವರ್ಷದ ಹಾಸ್ಯನಟ ಸೆಂಥಿಲ್ ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಂಥಿಲ್ ಅವರು, ನಾನು ಚನ್ನಾಗಿದ್ದೇನೆ, ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಭಿಮಾನಿಗಳು ಹಾಗೂ ಆತ್ಮೀಯರಿಗೆ ವಿನಂತಿ ಮಾಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ಸೆಂಥಿಲ್ ಅವರು ಸಹ ಹಾಸ್ಯನಟ ಗೌಂಡಮಣಿ ಜತೆ ಸೇರಿ ಅಭಿಮಾನಿಗಳ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. ಈ ಜೋಡಿ 80-90ರ ದಶಕದಲ್ಲಿ ಪ್ರಖ್ಯಾತಿಯಲ್ಲಿತ್ತು.

ವಯಸ್ಸಾದ ನಂತರ ಚಿತ್ರರಂಗದಿಂದ ದೂರವಾಗಿ ರಾಜಕೀಯಕ್ಕೆ ಇಳಿದಿದ್ದ ಸೆಂಥಿಲ್ ಅವರು ಎಐಎಡಿಎಂಕೆ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದರು.

ತಮಿಳಿನ 'ಕರಗಾಟಕರನ್', 'ಜೆಂಟಲ್ ಮನ್', 'ವೀರಾ' ಚಿತ್ರಗಳು ಸೆಂಥಿಲ್ ಅವರ ಅತ್ಯುತ್ತಮ ಚಿತ್ರಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com