ಶ್ರೀ ಶ್ರೀ ಬಗೆಗೆ ಟ್ವಿಂಕಲ್ ಖನ್ನ ಹಾಸ್ಯ; ಅಕ್ಷಯ್ 'ಹೌಸ್ ಫುಲ್-3' ಚಿತ್ರಕ್ಕೆ ಧಕ್ಕೆ?

ಟ್ವಿಂಕಲ್ ಖನ್ನ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಜೋಕಿಗೆ ಅವರ ಪತಿ ಅಕ್ಷಯ್ ಕುಮಾರ್ ಬೆಲೆತೆತ್ತಬೇಕಾಗಿ ಕಾಣಿಸುತ್ತಿದೆ.
ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನ
ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನ
Updated on

ನವದೆಹಲಿ: ಟ್ವಿಂಕಲ್ ಖನ್ನ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಜೋಕಿಗೆ ಅವರ ಪತಿ ಅಕ್ಷಯ್ ಕುಮಾರ್ ಬೆಲೆತೆತ್ತಬೇಕಾಗಿ ಕಾಣಿಸುತ್ತಿದೆ.

ಇತ್ತೀಚೆಗಷ್ಟೇ ೪೨ ವರ್ಷದ ಒಳಾಂಗಣ ವಿನ್ಯಾಸಗಾರ್ತಿ, ಟ್ವಿಟ್ಟರ್ ನಲ್ಲಿ ಆರ್ಟ್ ಆಫ್ ಲಿವಿಂಗ್ ನ ಯೋಗ ಗುರು ರವಿಶಂಕರ್ ಬಗ್ಗೆ ಲಘು ಹಾಸ್ಯ ಮಾಡಿದ್ದರು.

@ಮಿಸೆಸ್ಫನ್ನಿಬೋನ್ಸ್ ಎಂಬ ಟ್ವಿಟ್ಟರ್ ಹ್ಯಾಂಡಲ್ ಹೊಂದಿರುವ ಖನ್ನ "ಶ್ರೀ ಶ್ರೀ ನೊಬೆಲ್ ಬಹುಮಾನ ಗಳಿಸಿದ್ದರು ಆಗ ಅವರ ಗಡ್ಡ ಯೋಗದ ಭಂಗಿಯೊಂದರಲ್ಲಿ ಅವರ ಬಾಯಿಗೆ ಸಿಕ್ಕಿಹಾಕಿಕೊಂಡಿತು ಆದರೆ ಈ ಪಟ್ಟನ್ನು ಬಾಬಾ ರಾಮದೇವ್ ಖಚಿತವಾಗಿ ಮಾಡುತ್ತಾರೆ #ಪವಿತ್ರಮನುಷ್ಯರಕೂದಲಿನಕಥೆಗಳು" ಎಂದು ಟ್ವೀಟ್ ಮಾಡಿದ್ದರು.

ಇದನ್ನು ನಂತರ ತೆಗೆದು ಹಾಕಲಾಗಿತ್ತಾದರೂ ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ನಿರ್ದೇಶಕ ದರ್ಶನ್ ಹಾಥಿ "ಶ್ರೀ ಶ್ರೀ ಬಗ್ಗೆ @ಮಿಸೆಸ್ಫನ್ನಿಬೋನ್ಸ್ ಕೆಟ್ಟದಾಗಿ ಪ್ರತಿಕ್ರಿಯಿಸಿ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಲಕ್ಷಾಂತರ ಹಿಂಬಾಲಕರು #ಹೌಸ್ಫುಲ್-೩ ಸಿನೆಮಾವನ್ನು ನಿಷೇಧಿಸಲಿದ್ದಾರೆ" ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ವಿಂಕಲ್ "ಯಾರ ಭಾವನೆಗೂ ಧಕ್ಕೆ ತರುವುದಕ್ಕೆ ಬರೆದದ್ದಲ್ಲ, ಇದು ತಮಾಷೆಗಾಗಿ ಬರೆದದ್ದಷ್ಟೇ, ನನ್ನ ಕಡೆಯಿಂದಾದ ತಪ್ಪನ್ನು ಒಪ್ಪಿಕೊಳ್ಳುತ್ತೇನೆ" ಎಂದು ಕೂಡ ಬರೆದಿದ್ದರು.

"ತಪ್ಪಾಗಿದ್ದಕ್ಕೋ ಅಥವಾ ಹೌಸ್ಫುಲ್-೩ ನಿಷೇಧದ ಬಗ್ಗೆ ಭಯವೋ. ಏನೇ ಆಗಲಿ ವಯಸ್ಸಾಗುವುದಕ್ಕೂ ಬುದ್ಧಿವಂತರಾಗುವುದಕ್ಕೂ ವ್ಯತ್ಯಾಸವಿದೆ" ಎಂದು ಇದಕ್ಕೆ ಹಾಥಿ ಪ್ರತಿಕ್ರಿಯಿಸಿದ್ದರು.

ನಂತರ ಟ್ವಿಂಕಲ್ ಖನ್ನ ಬೆಂಬಲಕ್ಕೆ ಬಂದ ಹಲವರು ಆರ್ಟ್ ಆಫ್ ಲಿವಿಂಗ್ ಗೂಂಡಾಗಳಿಗೆ ಹೆದರಿ ಹಾಸ್ಯದ ಟ್ವೀಟ್ ತೆಗೆದು ಹಾಕಬಾರದಿತ್ತು ಎಂದು ಹಾಥಿ ಮೇಲೆ ವಾಗ್ದಾಳಿ ಕೂಡ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com