ಸಿಂಪಲ್ ಸುನಿಯಿಂದ 'ಆಪರೇಶನ್ ಅಲಮೇಲಮ್ಮ'
ಬೆಂಗಳೂರು: 'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ' ನಂತರ ನಿರ್ದೇಶಕ ಸುನಿ ಮುಂದಿನ ಯೋಜನೆಗೆ ಕೈಹಾಕಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಸಿನೆಮಾದ ಚಿತ್ರೀಕರಣ ಸದ್ದಿಲ್ಲದೇ ಸೋಮವಾರದಿಂದ ಪ್ರಾರಂಭವಾಗಿದೆ.
ಬಲ್ಲ ಮೂಲಗಳ ಪ್ರಕಾರ ಅವರೇ ಕಥೆ ಮತ್ತು ಸಂಭಾಷಣೆ ಬರೆದು ಥ್ರಿಲ್ಲರ್ ಚಿತ್ರವೊಂದಕ್ಕೆ ಕೈಹಾಕಿದ್ದಾರೆ ಸುನಿ. ಹಲವಾರು ಹೊಸಬರಿಗೆ ಅವಕಾಶ ನೀಡಿ ಉತ್ತೇಜಿಸಿರುವ ನಿರ್ದೇಶಕ ಈ ಸಿನೆಮಾದಲ್ಲೂ ಕೂಡ ರಂಗಭೂಮಿ ನಟ ಮನೀಶ್ ರಿಷಿ ಅವರಿಗೆ ಚೊಚ್ಚಲ ಬಾರಿಗೆ ಬೆಳ್ಳಿ ತೆರೆಯಲ್ಲಿ ನಟಿಸಲು ಅವಕಾಶ ನೀಡಿದ್ದಾರಂತೆ.
ಇನ್ನೂ ಬಿಡುಗಡೆಯಾಗಬೇಕಿರುವ 'ಯು-ಟರ್ನ್' ಚಲನಚಿತ್ರದ ನಾಯಕ ನಟಿ ಶ್ರದ್ಧಾ ಶ್ರೀನಾಥ್ 'ಆಪರೇಶನ್ ಅಲಮೇಲಮ್ಮ' ಸಿನೆಮಾಗೂ ನಾಯಕಿಯಾಗಿರುವುದು ವಿಶೇಷ. ಶ್ರದ್ಧಾ ಈಗಾಗಲೇ 'ಊರ್ವಿ' ಸಿನೆಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ.
ಸದ್ಯಕ್ಕೆ 'ಯು-ಟರ್ನ್' ನ್ಯೂಯಾರ್ಕ್ ಪ್ರದರ್ಶನಕ್ಕಾಗಿ ವಿದೇಶದಲ್ಲಿರುವ ಶ್ರದ್ಧಾ ಜೂನ್ ನಲ್ಲಿ ಚಿತ್ರತಂಡವನ್ನು ಸೇರಲಿದ್ದಾರಂತೆ.
ಥ್ರಿಲ್ಲರ್ ವಿಭಾಗದಲ್ಲಿ ಅಪಹರಣ ಕಥೆ ಹೊಂದಿರುವ ಈ ಸಿನೆಮಾ ಸುನಿ ಅವರ ಮೊದಲ ಪ್ರಯತ್ನವಂತೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ