ಕಾನ್ ಚಿತ್ರೋತ್ಸವಕ್ಕೆ 'ರೇಪ್ ಜೋಕ್'ನಿಂದ ನಿರ್ದೇಶಕ ವುಡಿ ಆಲನ್ ಗೆ ಸ್ವಾಗತ

೬೯ನೇ ಕಾನ್ ಸಿನೆಮೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ವುಡಿ ಆಲನ್ 'ರೇಪ್ ಹಾಸ್ಯ'ಕ್ಕೆ ಗುರಿಯಾದ ಘಟನೆ ಜರುಗಿದೆ.
ಕಳೆದ ವರ್ಷದ ಕಾನ್ ಚಿತ್ರೋತ್ಸವಕ್ಕೆ ಆಗಮಿಸಿದ್ದ ವುಡಿ ಆಲನ್ ಚಿತ್ರ
ಕಳೆದ ವರ್ಷದ ಕಾನ್ ಚಿತ್ರೋತ್ಸವಕ್ಕೆ ಆಗಮಿಸಿದ್ದ ವುಡಿ ಆಲನ್ ಚಿತ್ರ

ಪ್ಯಾರಿಸ್: ೬೯ನೇ ಕಾನ್ ಸಿನೆಮೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ವುಡಿ ಆಲನ್ 'ರೇಪ್ ಹಾಸ್ಯ'ಕ್ಕೆ ಗುರಿಯಾದ ಘಟನೆ ಜರುಗಿದೆ.

ತಮ್ಮ ಸಿನೆಮಾ 'ಕಫೆ ಸೊಸೈಟಿ' ಪ್ರಚಾರಕ್ಕಾಗಿ ಫ್ರಾನ್ಸ್ ನಲ್ಲಿರುವ ೮೦ ವರ್ಷದ ವುಡಿ ಆಲನ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ಉದಾಹರಿಸಿದ ಕಾರ್ಯಕ್ರಮ ನಿರೂಪಕ ಫ್ರಾನ್ಸ್ ನ ಹಾಸ್ಯಕಾರ ಲಾರೆಂಟ್ ಲ್ಯಾಫಿಟ್ ನೆರೆದ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

"ನೀವು ಅಮೆರಿಕಾದಲ್ಲಿ ರೇಪ್ ಪ್ರಕರಣಕ್ಕಾಗಿ ತಪ್ಪಿತಸ್ಥರಲ್ಲದಿದ್ದರೂ ಯೂರೋಪಿನಲ್ಲಿ ಹಲವಾರು ಚಿತ್ರಗಳನ್ನು ಚಿತ್ರೀಕರಣ ಮಾಡುತ್ತಿರುವುದಕ್ಕೆ ಸಂತಸ" ಎಂದು ಹಾಸ್ಯ ಮಾಡಿದ್ದಾರೆ ಲ್ಯಾಫೆಟ್. ಆಸ್ಕರ್ ವಿಜೇತ ನಿರ್ದೇಶಕ ರೋಮನ್ ಪೋಲನ್ಸ್ಕಿ, ೧೩ ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪದ ನಂತರ ಅಮೆರಿಕಾದಿಂದ ಓಡಿ ಬಂದು ಯೂರೋಪಿನಲ್ಲಿ ನೆಲೆಸಿದ್ದನ್ನು ಉದಾಹರಿಸಿ ನೇರವಾಗಿ ಹೇಳದೆ ಹಾಸ್ಯ ಮಾಡಿದ್ದಾರೆ.

"ಈ ರಾತ್ರಿ ನೀವು ಇಲ್ಲಿ ಬಂದಿದ್ದಕ್ಕೆ ಧನ್ಯವಾದಗಳು ಸರ್. ಆದರೆ ಇದು ಸರಿ, ನೀವು ಫ್ರೆಂಚ್ ನಟರಿಗೆ ಸರಿಯಾದ ಸಂಭಾವನೆ ನೀಡದೆ ಅವರನ್ನು ಸರಿಯಾದ ಸ್ಥಾನದಲ್ಲಿರಿಸಿದ್ದೀರಿ" ಎಂದು ಕೂಡ ಫ್ರೆಂಚ್ ನಲ್ಲಿ ನಿರೂಪಕ ಮುಂದುವರೆಸಿ ಹೇಳಿದ್ದಾರೆ.

ಈ ಹಿಂದ ಆಲನ್ ಅವರ ದತ್ತು ಪುತ್ರಿ ಡೈಲನ್, ತಾವು ಏಳು ವರ್ಷದ ಬಾಲಕಿಯಾಗಿರುವಾಗ ನಿರ್ದೇಶಕ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಆಲನ್ ಇದನ್ನು ಅಲ್ಲಗೆಳೆದಿದ್ದರು.

ಏಳು ತಿಂಗಳ ತನಿಖೆಯ ನಂತರ ೧೯೯೩ ರಲ್ಲಿ ಈ ಪ್ರಕರಣ ವಜಾಗೊಂಡಿತ್ತು ಮತ್ತು ೨೦೧೪ ರಲ್ಲಿ ಮತ್ತೆ ಆರೋಪಗಳು ಕೇಳಿಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com