ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ತಿಥಿ ಅತ್ಯುತ್ತಮ ಚಿತ್ರ, ವಿಜಯ್ ರಾಘವೇಂದ್ರ ಅತ್ಯುತ್ತಮ ನಟ

2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು, 'ಮಾರಿಕೊಂಡವರು'......
ತಿಥಿ ಚಿತ್ರ ಸ್ಟಿಲ್
ತಿಥಿ ಚಿತ್ರ ಸ್ಟಿಲ್
ಬೆಂಗಳೂರು: 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು, 'ಮಾರಿಕೊಂಡವರು' ದ್ವಿತೀಯ ಅತ್ಯುತ್ತಮ ಚಿತ್ರ ಹಾಗೂ ಮೈತ್ರಿ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ ವಾರ್ತಾ ಸಚಿವ ರೋಶನ್ ಬೇಗ್ ಅವರು, ನಟ ವಿಜಯ್ ರಾಘವೇಂದ್ರ ಅವರು ಶಿವಯೋಗಿ ಪುಟ್ಟಯ್ಯಜ್ಜ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದರೆ, ಗಂಗಾ ಚಿತ್ರದಲ್ಲಿನ ಅಭಿನಯಕ್ಕಾಗಿ ಮಾಲಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ರಮೇಶ್,ಭಟ್ ಅವರು ಮನಮಂಥನ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ ಎಂದರು.
ಇನ್ನು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ 'ಕೃಷ್ಣಲೀಲಾ'ಗೆ ಲಭಿಸಿದೆ. ಮನೆ ಮೊದಲ ಪಾಠ ಶಾಲೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಅನುಪ್ ಭಂಡಾರಿ ಅವರ ರಂಗಿತರಂಗ ಚೊಚ್ಚಲ ನಿರ್ದೆಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ(ರಂಗಿತರಂಗ), ಅತ್ಯುತ್ತಮ ಸಂಭಾಷಣೆ ಈರೇಗೌಡ (ತಿಥಿ), 
ಅತ್ಯುತ್ತಮ ಛಾಯಾಗ್ರಹಣ ಅನಂತ್ ಅರಸು(ಲಾಸ್ಟ್ ಬಸ್), ಅತ್ಯುತ್ತಮ ಹಿನ್ನೆಲೆ ಗಾಯಕ ಸಂತೋಷ್ ವೆಂಕಿ, ಅತ್ಯುತ್ತಮ ಸಂಕಲನ ಸೃಜತ್ ನಾಯಕ್, ಅತ್ಯುತ್ತಮ ಬಾಲನಟಿ ಮೇವಿಷ್, ಅತ್ಯುತ್ತಮ ಗೀತ ರಚನೆ ವಿ.ನಾಗೇಂದ್ರ ಪ್ರಸಾದ್.
ಪ್ರಶಸ್ತಿ ಪಟ್ಟಿ:
ಪ್ರಥಮ ಅತ್ಯುತ್ತಮ ಚಿತ್ರ – ತಿಥಿ
ದ್ವಿತೀಯ ಅತ್ಯುತ್ತಮ ಚಿತ್ರ – ಮಾರಿಕೊಂಡವರು
ತೃತೀಯ ಅತ್ಯುತ್ತಮ ಚಿತ್ರ – ಮೈತ್ರಿ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ – ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಕೃಷ್ಣ ಲೀಲಾ
ಅತ್ಯುತ್ತಮ ಮಕ್ಕಳ ಚಿತ್ರ – ಮನೆ ಮೊದಲ ಪಾಠಶಾಲೆ
ನಿದೇರ್ಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ – ರಂಗಿ ತರಂಗ
ಅತ್ಯುತ್ತಮ ಕರ್ನಾಟಕ ಪ್ರಾದೇಶಿ ಭಾಷಾ ಚಿತ್ರ – ತಳಂಗ ನೀರ್ (ಕೊಡವ ಭಾಷೆ)
ಅತ್ಯುತ್ತಮ ನಟ – ವಿಜಯ ರಾಘವೇಂದ್ರ (ಚಿತ್ರ: ಶಿವಯೋಗಿ ಶ್ರೀ ಪಟ್ಟಯ್ಯಜ್ಜ)
ಅತ್ಯುತ್ತಮ ನಟಿ – ಮಾಲಾಶ್ರೀ (ಚಿತ್ರ: ಗಂಗಾ)
ಅತ್ಯುತ್ತಮ ಪೋಷಕ ನಟ – ರಮೇಶ್ ಭಟ್ (ಚಿತ್ರ: ಮನ ಮಂಥನ)
ಅತ್ಯುತ್ತಮ ಪೋಷಕ ನಟಿ – ಪೂಜಾ ಎಸ್.ಎಂ. (ಚಿತ್ರ: ತಿಥಿ)
ಅತ್ಯುತ್ತಮ ಕತೆ – ಸರಜೂ ಕಾಟ್ಕರ್ (ಚಿತ್ರ: ಜುಲೈ 22, 1947)
ಅತ್ಯುತ್ತಮ ಚಿತ್ರಕತೆ – ಶಶಾಂಕ್, ರಘುಕೋವಿ (ಚಿತ್ರ: ಕೃಷ್ಣ ಲೀಲಾ)
ಅತ್ಯುತ್ತಮ ಸಂಭಾಷಣೆ – ಈರೇಗೌಡ (ಚಿತ್ರ: ತಿಥಿ)
ಅತ್ಯುತ್ತಮ ಛಾಯಾಗ್ರಹಣ – ಶ್ರೀ ಅನಂತ ಅರಸು (ಚಿತ್ರ: ಲಾಸ್ಟ್ ಬಸ್)
ಅತ್ಯುತ್ತಮ ಸಂಗೀತ ನಿರ್ದೇಶನ – ಶ್ರೀಧರ್ ವಿ ಸಂಭ್ರಮ್ (ಚಿತ್ರ: ಕೃಷ್ಣ ಲೀಲಾ)
ಅತ್ಯುತ್ತಮ ಸಂಕಲನ – ಸೃಜಿತ್ ನಾಯಕ್ (ಚಿತ್ರ: ಚಂಡಿಕೋರಿ)
ಅತ್ಯುತ್ತಮ ಬಾಲ ನಟಿ – ಮಾಸ್ಟರ್ ಲಿಖಿತ್ ಶರ್ಮ (ಚಿತ್ರ: ಅಷ್ಟಾವಕ್ರ)
ಅತ್ಯುತ್ತಮ ಬಾಲ ನಟಿ – ಬೇಬಿ ಮೇವಿಷ್ (ಚಿತ್ರ: ಸವಿ ನಿಲಯ)
ಅತ್ಯುತ್ತಮ ಗೀತ ರಚನೆ – ನಾಗೇಂದ್ರ ಪ್ರಸಾದ್ (ಚಿತ್ರ: ಮುದ್ದು ಮನಸೇ)
ಅತ್ಯುತ್ತಮ ಕಲಾ ನಿರ್ದೇಶನ – ಅವಿನಾಶ್ ನರಸಿಂಹರಾಜ್ (ಚಿತ್ರ: ಲಾಸ್ಟ್ ಬಸ್)
ಅತ್ಯುತ್ತಮ ಹಿನ್ನೆಲೆ ಗಾಯಕ – ಸಂತೋಷ್ ವೆಂಕಿ (ಚಿತ್ರ: ಪ್ರೀತಿಯಲ್ಲಿ ಸಹಜ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಶಮಿತಾ ಮಲ್ನಾಡ್ (ಚಿತ್ರ: ಬೆಕ್ಕು)
ತೀರ್ಪುಗಾರರ ವಿಶೇಷ ಪ್ರಶಸ್ತಿ – ಮೆ. ಜ್ಯೂಪಿಟರ್ ಅನಿಮೇಷನ್ (ಚಿತ್ರ: ಶಿವಲಿಂಗ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com