ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ
ಸಿನಿಮಾ ಸುದ್ದಿ
ನೇರಳೆ ತುಟಿಬಣ್ಣದಲ್ಲಿ ಐಶ್ವರ್ಯ ಅದ್ಭುತವಾಗಿ ಕಾಣಿಸುತ್ತಿದ್ದರು: ಅಭಿಷೇಕ್
೬೯ನೇ ಕಾನ್ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ನಡೆಯುವಾಗ ನೇರಳೆ ಬಣ್ಣದ ಲಿಪ್ಸ್ಟಿಕ್ ಹಚ್ಚಿದ ನೋಟಕ್ಕೆ ಅವರ ಅಭಿಮಾನಿಗಳಿಂದ ಹಿಡಿದು ಫ್ಯಾಶನ್ ಪೊಲೀಸರವರೆಗೆ
ಮುಂಬೈ: ೬೯ನೇ ಕಾನ್ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ನಡೆಯುವಾಗ ನೇರಳೆ ಬಣ್ಣದ ಲಿಪ್ಸ್ಟಿಕ್ ಹಚ್ಚಿದ ನೋಟಕ್ಕೆ ಅವರ ಅಭಿಮಾನಿಗಳಿಂದ ಹಿಡಿದು ಫ್ಯಾಶನ್ ಪೊಲೀಸರವರೆಗೆ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ ಸಂದರ್ಭದಲ್ಲಿ, ಐಶ್ವರ್ಯಾ ರೈ ನೋಟವನ್ನು ಅವರ ಪತಿ ಅಭಿಷೇಕ್ ಬಚ್ಚನ್ ಕೊಂಡಾಡಿದ್ದಾರೆ.
ಐಶ್ವರ್ಯಾ ಅವರ ನೇರಳೆ ತುಟಿಬಣ್ಣದ ಬಗ್ಗೆ ಕೇಳಿದ ಪ್ರಶ್ನೆಗೆ "ಅವರು ಅದ್ಭುತವಾಗಿ ಕಾಣಿಸುತ್ತಿದ್ದರು ಎಂದೆನಿಸಿತು ನನಗೆ.. ಅವರು ಯಾವಾಗಲು ಹಾಗೆಯೇ" ಎಂದಿದ್ದಾರೆ ಅಭಿಷೇಕ್.
ಲಾರಿಯಲ್ ಪ್ಯಾರಿಸ್ ಸೌಂದರ್ಯವರ್ಧಕದ ಪ್ರತಿನಿಧಿಯಾಗಿ ಕಾನ್ ಚಿತ್ರೋತ್ಸವದ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದ ಐಶ್ವರ್ಯ ನೆರೆದವರ ಹುಬ್ಬೇರಿಸಿದ್ದರು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಅವರನ್ನು ಟ್ರಾಲ್ ಮಾಡಿದ್ದರು.
ಇದು ಐಶ್ವರ್ಯ ಅವರಿಗೆ ೧೫ ನೆ ಕಾನ್ ಚಲನಚಿತ್ರೋತ್ಸವವಾಗಿದ್ದು, ತಮ್ಮ ಮುಂಬರುವ ಚಿತ್ರ 'ಸರಬ್ಜಿತ್' ಕೂಡ ಅಲ್ಲಿ ಪ್ರದರ್ಶನ ಕಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ