'ಮಿಸ್ ಯುನಿವರ್ಸ್' ಪಟ್ಟಕ್ಕೇರಿದ ೨೨ ವರ್ಷಗಳ ಸಂಭ್ರಮಾಚರಣೆಯಲ್ಲಿ ಸುಶ್ಮಿತಾ

೧೯೯೪ರಲ್ಲಿ ಪ್ರತಿಷ್ಟಿತ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊದಲ ಭಾರತೀಯಳಾಗಿದ್ದ ನಟಿ ಸುಶ್ಮಿತಾ ಸೇನ್ ಶನಿವಾರ ಆ 'ಹೆಮ್ಮೆ'ಯ ಕ್ಷಣದ ನೆನಪನ್ನು ಸಂಭ್ರಮಿಸಿದ್ದಾರೆ.
ಸುಶ್ಮಿತಾ ಸೇನ್ ೨೨ ವರ್ಷಗಳ ಹಿಂದೆ ಮಿಸ್ ಯೂನಿವರ್ಸ್ ಗೆದ್ದ ಕ್ಷಣ
ಸುಶ್ಮಿತಾ ಸೇನ್ ೨೨ ವರ್ಷಗಳ ಹಿಂದೆ ಮಿಸ್ ಯೂನಿವರ್ಸ್ ಗೆದ್ದ ಕ್ಷಣ

ಮುಂಬೈ: ೧೯೯೪ರಲ್ಲಿ ಪ್ರತಿಷ್ಟಿತ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊದಲ ಭಾರತೀಯಳಾಗಿದ್ದ ನಟಿ ಸುಶ್ಮಿತಾ ಸೇನ್ ಶನಿವಾರ ಆ 'ಹೆಮ್ಮೆ'ಯ ಕ್ಷಣದ ನೆನಪನ್ನು  ಸಂಭ್ರಮಿಸಿದ್ದಾರೆ.

ಟ್ವೀಟ್ ಮಾಡಿರುವ ಸುಶ್ಮಿತಾ, ಮಿಸ್ ಯೂನಿವರ್ಸ್ ಗೆದ್ದ ಆ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅವರು ಬರೆದಿರುವ ಸರಣಿ ಟ್ವೀಟ್ ಗಳಲ್ಲಿ "ನನಗೆ ಮಾತುಗಳೇ ಹೊರಡುತ್ತಿಲ್ಲ (ಇದು ವಿರಳ). ಸುಂದರ ಜನರೇ ಧನ್ಯವಾದಗಳು. ಮೇ ೨೧ರಂದು ಮಿಸ್ ಯೂನಿವರ್ಸ್ ಗೆದ್ದದ್ದಕ್ಕೆ ೨೨ ವರ್ಷಗಳು.

"ಮೇ ೨೧, ೧೯೯೪ - ಭಾರತ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಗೆದ್ದಿತ್ತು. ಈ ಗೌರವನ್ನು ನನ್ನ ದೇಶಕ್ಕೆ ತರಲು ಸಹಾಯ ಮಾಡಿದ ದೇವರಿಗೆ ಋಣಿ" ಎಂದು ಕೂಡ ಅವರು ಬರೆದಿದ್ದಾರೆ.

ಹಾಗೆಯೇ ೧೯೯೪ ರ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಕೊಲಂಬಿಯಾದ ಚೆಲುವೆ ಕೆರೋಲಿನಾ ಗೋಮೆಜ್ ಅವರಿಗೂ ಧನ್ಯವಾದ ಹೇಳಿದ್ದಾರೆ.

"ನನಗೆ ಘನತೆ ಏನೆಂದು ಹೇಳಿಕೊಟ್ಟಿದ್ದಕ್ಕೆ ೧೯೯೩ರ ಮಿಸ್ ಕೊಲಂಬಿಯಾ ಕೆರೋಲಿನಾ ಗೋಮೆಜ್ ಧನ್ಯವಾದಗಳು. ಎಂತಹ ಮಹಿಳೆ ನೀವು. ಕೆರೋಲಿನಾ ನಿಮ್ಮ ಮೇಲೆ ನನಗೆ ಅಪಾರ ಪ್ರೀತಿಯಿದೆ" ಎಂದು ಕೂಡ ಅವರು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com