ಜೂನಿಯರ್ ಎನ್ ಟಿ ಆರ್ ತಿರಸ್ಕರಿಸಿದ್ದ 'ಬ್ರಹ್ಮೋತ್ಸವಂ' ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ದಾರುಣ ಸೋಲು?

ಹೋದವಾರ ಬಿಡುಗಡೆಯಾದ ತೆಲುಗು ಕೌಟುಂಬಿಕ ಡ್ರಾಮಾ ಚಿತ್ರ 'ಬ್ರಹ್ಮೋತ್ಸವಂ' ಚಿತ್ರಕ್ಕೆ ನಟ ಮಹೇಶ್ ಬಾಬು ಮೊದಲ ಆಯ್ಕೆಯಾಗಿರಲಿಲ್ಲವಂತೆ. ಈ ಚಿತ್ರಕ್ಕೆ ಮೊದಲು ನಟ ಜೂನಿಯರ್ ಎನ್ ಟಿ ಆರ್
'ಬ್ರಹ್ಮೋತ್ಸವಂ' ಸಿನೆಮಾದಲ್ಲಿ ನಟ ಮಹೇಶ್ ಬಾಬು
'ಬ್ರಹ್ಮೋತ್ಸವಂ' ಸಿನೆಮಾದಲ್ಲಿ ನಟ ಮಹೇಶ್ ಬಾಬು
Updated on

ಚೆನ್ನೈ: ಹೋದವಾರ ಬಿಡುಗಡೆಯಾದ ತೆಲುಗು ಕೌಟುಂಬಿಕ ಡ್ರಾಮಾ ಚಿತ್ರ 'ಬ್ರಹ್ಮೋತ್ಸವಂ' ಚಿತ್ರಕ್ಕೆ ನಟ ಮಹೇಶ್ ಬಾಬು ಮೊದಲ ಆಯ್ಕೆಯಾಗಿರಲಿಲ್ಲವಂತೆ. ಈ ಚಿತ್ರಕ್ಕೆ ಮೊದಲು ನಟ ಜೂನಿಯರ್ ಎನ್ ಟಿ ಆರ್ ಅವರನ್ನು ಕೇಳಿಕೊಳ್ಳಲಾಗಿತ್ತಂತೆ. ಆದರೆ ಸ್ಕ್ರಿಪ್ಟ್ ಬಗ್ಗೆ ಅತೃಪ್ತಿ ಹೊಂದಿದ್ದ ನಟ ಇದನ್ನು ತಿರಸ್ಕತಿಸಿದ್ದರಂತೆ.

"ನಿರ್ದೇಶಕ ಶ್ರೀಕಾಂತ್ ಅಡ್ಡಾಳ ಅವರ ಮೊದಲ ಆಯ್ಕೆ ಎನ್ ಟಿ ಆರ್ ಆಗಿತ್ತು. ಅವರನ್ನು ಒಂದು ವರ್ಷದ ಹಿಂದೆ ಕೇಳಿಕೊಂಡಾಗ, ನಟ ಎನ್ ಟಿ ಆರ್ ಗೆ ಕಥೆ ಇಷ್ಟವಾದರು, ಸ್ಕ್ರಿಪ್ಟ್ ನಲ್ಲಿ ಕೆಲವು ಬದಲಾವಣೆಗಳನ್ನು ತಂದು ಮತ್ತೆ ಬರೆಯುವಂತೆ ಹೇಳಿದ್ದರು" ಎಂದು ಮೂಲಗಳು ತಿಳಿಸಿವೆ.

ಅಡ್ಡಾಳ ಅವರಿಗೆ ಎನ್ ಟಿ ಆರ್ ಸಮಯ ನೀಡಿ ಕಾದು ಕೂತರು ಆದರೆ ನಿರ್ದೇಶಕ ನೂತನ ಸ್ಕ್ರಿಪ್ಟ್ ನೊಂದಿಗೆ ಹಿಂದಿರುಗಲಿಲ್ಲ ಎನ್ನುವ ಮೂಲಗಳು ಅನ್ಯ ಮಾರ್ಗವಿಲ್ಲದೆ ಎನ್ ಟಿ ಆರ್ ನಿರ್ದೇಶಕ ಸುಕುಮಾರ್ ಅವರ 'ನನ್ನಕು ಪ್ರೇಮಥೊ' ಚಿತ್ರಕ್ಕೆ ಸಹಿ ಹಾಕಿದರು ಎಂದು ತಿಳಿಸುತ್ತಾರೆ.

'ಈ ವರ್ಷದ ಮೊದಲ ಭಾಗದಲ್ಲಿ ಬಿಡುಗಡೆಯಾದ 'ನನ್ನಕು ಪ್ರೇಮಥೊ' ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕ ಕಂಡರೆ, 'ಬ್ರಹ್ಮೋತ್ಸವಂ' ನೆಲ ಕಚ್ಚಿದೆ ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com