ದೆವ್ವ ಹಿಡಿದಿರುವ ಕನ್ನಡ ಚಿತ್ರರಂಗಕ್ಕೆ 'ಕರ್ವ' ಹೊಸ ಸೇರ್ಪಡೆ?
ಬೆಂಗಳೂರು: ಕಳೆದ ಮೂರು ತಿಂಗಳಲ್ಲಿ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಚಿತ್ರಗಳು 'ಅತಿಮಾನುಷ' ಶಕ್ತಿಯ ಚಿತ್ರಗಳು! ಅದಕ್ಕೆ ಈಗ ಸಿನೆರಸಿಕರ ನಡುವೆ ಪ್ರಖ್ಯಾತವಾಗಿರುವ ಜೋಕ್ ಎಂದರೆ 'ಕನ್ನಡ ಚಿತ್ರರಂಗಕ್ಕೆ ದೆವ್ವ ಹಿಡಿಡಿದೆ' ಎಂಬುದು. ನವನೀತ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ 'ಕರ್ವ' ನಿಗೂಢ ಥ್ರಿಲ್ಲರ್ ಸಿನೆಮಾ.
ಇದಕ್ಕೆ ಹೌದು ಮತ್ತು ಇಲ್ಲ ಎನ್ನುತ್ತಾರೆ ನಿರ್ದೇಶಕ. "ಈ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಬರೆದದ್ದು. ಆದರೆ '೬-೫=೨' ಸಿನೆಮಾ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯಿತು. ಆ ಸಿನೆಮಾಗೆ ಧನ್ಯವಾದಗಳು ಈಗ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಸಿನೆಮಾಗಳಲ್ಲಿ ಬಹುತೇಕ ಹಾರರ್ ಅಥವಾ ನಿಗೂಢ ಥ್ರಿಲ್ಲರ್ ಗಳೇ. ನಾನು ಆ ಕುರಿಮಂದೆಯನ್ನು ಹಿಂಬಾಲಿಸುತ್ತಿಲ್ಲ, ಆದರೆ ಸ್ಪರ್ಧೆಗೆ ಸಿದ್ಧವಾಗಿದ್ದೇನೆ" ಎನ್ನುತ್ತಾರೆ ನವನೀತ್.
ಕರ್ವ ಪದಕ್ಕೆ ಸಂಸ್ಕೃತದಲ್ಲಿ 'ನಿಗೂಢ' ಎಂಬ ಅರ್ಥವಿದೆ ಎನ್ನುವ ನನನೀತ್ "ಇದು ಪರಿಹಾರ ಇಲ್ಲದ ನಿಗೂಢ" ಎನ್ನುತ್ತಾರೆ "ಜನ ನೋಡಲು ಕುತೂಹಲ ಉಳಿಸಿಕೊಳ್ಳಬೇಕಿರುವುದರಿಂದ ಹೆಚ್ಚಿನ ಗುಟ್ಟು ಬಿಚ್ಚಡಲು ಸಾಧ್ಯವಿಲ್ಲ" ಎಂದು ಕೂಡ ತಿಳಿಸುತ್ತಾರೆ.
ತಮ್ಮ ೧೭ ನೆ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟ ನವನೀತ್, ಎಸ್ ನಾರಾಯಣ್ ಮತ್ತು ರಾಘವ ಲೋಕಿ ಮತ್ತಿತರ ನಿರ್ದೇಶಕರಿಗೆ ಸಹ ನಿರ್ದೇಶಕನಾಗಿ ದುಡಿದ ಅನುಭವವಿದೆ. ೧೨ ವರ್ಷಗಳಿಂದ ಸಹಾಯಕನಾಗಿ ಕಲಿಯುತ್ತ ಎಲ್ಲವನ್ನು ಗಮನಿಸುತ್ತಾ ಬಂದಿದ್ದಾರಂತೆ. "ನನ್ನ ಕಿರುಚಿತ್ರ 'ನೆವರ್ ಎಂಡಿಗ್' ನನ್ನನ್ನು ಮುಂದಕ್ಕೆ ಕೊಂಡೊಯ್ದಿತು. ಕೃಷ್ಣ ಚೈತನ್ಯ ಅದನ್ನು ನೋಡಿ 'ಕರ್ವ' ಸಿನೆಮಾ ನಿರ್ದೇಶನ ಮಾಡಲು ಅವಕಾಶ ನೀಡಿದರು" ಎಂದು ವಿವರಿಸುತ್ತಾರೆ.
'ಲೂಸಿಯಾ', '೧ಸ್ಟ್ ರ್ಯಾಂಕ್ ರಾಜು', 'ರಂಗಿತರಂಗ', 'ತಿಥಿ' ಮತ್ತು ಇತ್ತೀಚೆಗೆ ಬಿಡುಗಡೆಯಾದ 'ಯು-ಟರ್ನ್' ಸಿನೆಮಾಗಳ ಉದಾಹರಣೆ ತೆಗೆದುಕೊಳ್ಳುವ ನವನೀತ್ "ಅವರು ಯಾವ ಸ್ಟಾರ್ ಗಳನ್ನು ತೊಡಗಿಸಿಕೊಳ್ಳಲಿಲ್ಲ ಆದರೆ ಆ ಸಿನೆಮಾಗಳೆಲ್ಲ ಮಾತನಾಡುತ್ತಿವೆ. ತಾರಾ ನಟರು ಇಲ್ಲದೆ ಇದ್ದರೂ ಒಳ್ಳೆಯ ನಿರೂಪಣೆ ಇರುವ ಸಿನೆಮಾಗಳನ್ನು ಜನ ಇಷ್ಟಪಡುತ್ತಾರೆ. ನಾನು ಅದನ್ನು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ.
ಹಿರಿಯ ನಟ ದೇವರಾಜ್, ತಿಲಕ್ ಶೇಖರ್, ಆರ್ ಜೆ ರೋಹಿತ್, ಅನಿಷಾ ಆಂಬ್ರೋಸ್ ಮತ್ತು ಅನು ಪೂವಮ್ಮ ನಟಿಸಿದ್ದಾರೆ. ಈ ಸಿನೆಮಾಗೆ ಯಾವುದೇ ಹಾಡುಗಳಿಲ್ಲ. ಮೋಹನ್ ಸಿನೆಮ್ಯಾಟೋಗ್ರಾಫರ್.

