ಬೆಂಗಳೂರು: ಸಿಂಹಳಿ ಭಾಷೆಗೆ ಡಬ್ ಆಗಲಿರುವ ಮೊದಲ ಕನ್ನಡ ಸಿನೆಮಾ 'ಕರ್ವ' ಎಂಬ ಹೆಗ್ಗಳಿಕೆಗೆ ಬಿಡುಗಡೆಗೆ ಮುಂಚಿತವಾಗಿಯೇ ಒಳಪಟ್ಟಿದೆ. ಚೊಚ್ಚಲ ಬಾರಿಗೆ ನವನೀತ್ ನಿರ್ದೇಶನದ ಹಾರರ್-ಥ್ರಿಲ್ಲರ್ 'ಕರ್ವ' ಸಿನೆಮಾವನ್ನು ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ.
ಶ್ರೀಲಂಕಾದ ಖ್ಯಾತ ನಟರೊಬ್ಬರಿಗೆ ನಿರ್ಮಾಪಕರನ್ನು ಅವರ ಗೆಳೆಯ ಪರಿಚಯ ಮಾಡಿಕೊಟ್ಟರಂತೆ. ಅವರು 'ಕರ್ವ' ಸಿನೆಮಾದ ಡಬ್ ಆವೃತ್ತಿಯನ್ನು ಬಿಡುಗಡೆ ಮಾಡಲು ಉತ್ಸಾಹ ತೋರಿದ್ದಾರಂತೆ. "ಸಬ್ ಟೈಟಲ್ಸ್ ಸಿದ್ಧಪಡಿಸಲು ಅವರು ಕೇಳಿಕೊಂಡಿದ್ದಾರೆ ನಂತರ ಅವರು ಈ ಯೋಜನೆಯನ್ನು ಮುಂದುವರೆಸಲಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಅವರು ಆಸಕ್ತಿ ತೋರಿರುವುದರಿಂದ ಈ ಸಿನೆಮಾವನ್ನು ಅಲ್ಲಿಗೆ ಕೊಂಡೊಯ್ಯಲ್ಲಿದ್ದೇವೆ" ಎನ್ನುತ್ತಾರೆ ಚೈತನ್ಯ.
ಆಸಕ್ತಿದಾಯಕ ಎಂದರೆ ಈ ಸಿನೆಮಾ ಪ್ರಮುಖ ದೃಶ್ಯಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದು ಕೂಡ ಅಲ್ಲಿ ಬಿಡುಗಡೆಗೆ ಸಹಾಯ ಮಾಡಲಿದೆಯಂತೆ. ಕರ್ನಾಟಕದಲ್ಲಿ ಈ ವಾರ ಬಿಡುಗಡೆಯಾಗಲಿರುವ 'ಕರ್ವ'ದಲ್ಲಿ ದೇವರಾಜ್, ತಿಲಕ್ ಶೇಖರ್, ಆರ್ ಜೆ ರೋಹಿತ್ ಮುಂತಾದವರು ನಟಿಸಿದ್ದಾರೆ.
Advertisement