ಕನ್ನಡ ಚಿತ್ರರಂಗದ ಗಮನ ಸೆಳೆದ ನೂತನ ನಟಿ ಶ್ರದ್ಧಾ

'ಯು-ಟರ್ನ್' ಸಿನೆಮಾದ ಮುಖ್ಯ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಈಗ ಗಾಂಧಿನಗರದ ಬಹು ಚರ್ಚಿತ ನಟಿಯಾಗಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲೇ ಗಮನಾರ್ಹವಾಗಿ ನಟನೆ ನೀಡಿರುವ ನಟಿ ಈಗ ಚಿತ್ರರಂಗದ
'ಯು-ಟರ್ನ್' ಸಿನೆಮಾದ ಮುಖ್ಯ ಪಾತ್ರಧಾರಿ ಶ್ರದ್ಧಾ ಶ್ರೀನಾಥ್
'ಯು-ಟರ್ನ್' ಸಿನೆಮಾದ ಮುಖ್ಯ ಪಾತ್ರಧಾರಿ ಶ್ರದ್ಧಾ ಶ್ರೀನಾಥ್

ಬೆಂಗಳೂರು: 'ಯು-ಟರ್ನ್' ಸಿನೆಮಾದ ಮುಖ್ಯ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಈಗ ಗಾಂಧಿನಗರದ ಬಹು ಚರ್ಚಿತ ನಟಿಯಾಗಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲೇ ಗಮನಾರ್ಹವಾಗಿ ನಟನೆ ನೀಡಿರುವ ನಟಿ ಈಗ ಚಿತ್ರರಂಗದ ಕೇಂದ್ರಬಿಂದುವಾಗಿರುವುದು ವಿಶೇಷ.

ಎಲ್ಲರ ಗಮನ ಶ್ರದ್ಧಾ ಅವರೆಡೆಗೆ ನೆಟ್ಟಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಈಗ ಕಟ್ಟಿಕೊಂದಿರುವುದನ್ನು ಕೈಚೆಲ್ಲಲು ಬಯಸದ ನಟಿ "ಈ ಸಿನೆಮಾದಲ್ಲಿ ಸ್ಕ್ರಿಪ್ಟ್ ನಿಜವಾಗಿಯೂ ಗೆದ್ದಿದೆ. ನಾನು ಸ್ಕ್ರಿಪ್ಟ್ ಓದಿದ ದಿನವೇ, ನಾನು ಈ ಸ್ಕ್ರಿಪ್ಟ್ ನ ಭಾಗವಾಗದೇ ಹೋದರು ಈ ಸಿನೆಮಾ ಅದ್ಭುತವಾಗಿ ಮೂಡಿ ಬರಲಿದೆ ಎಂದು ತಿಳಿದಿದ್ದೆ" ಎನ್ನುತ್ತಾರೆ ಶ್ರದ್ಧಾ.

ಅವರಿಗೆ ಆ ಸಿನೆಮಾದಲ್ಲಿ ನಟಿಸಲು ಅವಕಾಶ ಒದಗಿ ಬಂದ ದಿನವನ್ನು ನೆನಪಿಸಿಕೊಳ್ಳುವ ನಟಿ, ಆಗ ಈ ಸಿನೆಮಾ ಶೀರ್ಷಿಕೆ 'ಯು-ಟರ್ನ್ ಮತ್ತು ಹೆಲ್ಮೆಟ್ ಹುಡುಗಿ' ಎಂದಿತ್ತು ಎನ್ನುತ್ತಾರೆ. "ನಾನು ಆಯ್ಕೆಯಾಗಿದ್ದೇನೆ ಎಂದು ಪವನ್ ಕುಮಾರ್ ಅವರಿಂದ ಸಂದೇಶ ಬಂದಿದ್ದು ನಂಬಲಾಗಲೇ ಇಲ್ಲ. ದಿನಾಂಕ, ಸಂಭಾವನೆ ಇವುಗಳ ಮಾತನಾಡುವವರೆಗೂ ನನಗೆ ನಂಬಲು ಸಾಧ್ಯವಾಗಿರಲಿಲ್ಲ" ಎನ್ನುತ್ತಾರೆ ಶ್ರದ್ಧಾ.

ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ನಿರ್ದೇಶಕ ಪವನ್ ಕುಮಾರ್ ಅವರಿಗೆ ಧನ್ಯವಾದ ಹೇಳುವ ಶ್ರದ್ಧಾ "ಅವರ ಮೇಲೆ ನನಗೆ ಬಹಳ ಗೌರವ ಇದೆ, ನನ್ನ ಸಲಹೆಗಾರ ಅವರು" ಎನ್ನುತ್ತಾರೆ. ತಮ್ಮ ರಂಗಭೂಮಿ ನಟನೆಯ ತರಬೇತಿಯಿಂದ ಸಹಾಯವಾಯಿತು ಎನ್ನುವ ಅವರು "ಈ ಪಾತ್ರ ನನಗೆ ಕಷ್ಟ ಎಂದೆನಿಸಲೇ ಇಲ್ಲ. ಇದಕ್ಕಾಗಿ ನನ್ನನ್ನು ರಂಗಭೂಮಿ ವೇದಿಕೆ ಮೇಲೆ ತರಲು ಪ್ರಯತ್ನಿಸಿದ ಎಲ್ಲರನ್ನು ನೆನಪಿಸಿಕೊಳ್ಳಬೇಕು. ಜೊತೆ ಪವನ್ ಕೂಡ ಸರಳ ಸೂಚನೆಗಳನ್ನು ನೀಡಿದ್ದರು ಮತ್ತು ಕಥೆ ನಿಖರವಾಗಿತ್ತು ಹಾಗು ನನ್ನ ಪಾತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಟಿಸಿದೆ" ಎನ್ನುತ್ತಾರೆ.

ಈ ಸಿನೆಮಾ ತಮಿಳು ಮತ್ತು ತೆಲುಗಿನಲ್ಲಿ ರಿಮೇಕ್ ಆದರೆ ನಟಿಸುವ ಆಸಕ್ತಿ ಹೊಂದಿರುವ ನಟಿ, ಈ ಸಿನೆಮಾದ ಬಗ್ಗೆ ಸಮಂತಾ ರುತ್ ಪ್ರಭು ಆಸಕ್ತಿ ತೋರಿಸಿರುವುದನ್ನೂ ಗುರುತಿಸುತ್ತಾರೆ. "ಒಂದು ಪಕ್ಷ ಅವರೇ ನಟಿಸಿದರೆ ಈ ಸಿನೆಮಾ ಮತ್ತೊಂದು ಹಟಕ್ಕೆ ಜಿಗಿಯುತ್ತದೆ" ಎನ್ನುತ್ತಾರೆ.

ಈಗಾಗಲೇ ಪ್ರದೀಪ್ ವರ್ಮಾ ಅವರ 'ಉರ್ವಿ' ಮತ್ತು ಸುನಿ ಅವರ 'ಆಪರೇಶನ್ ಅಲಮೇಲಮ್ಮ' ಸಿನೆಮಾಗಳಲ್ಲಿ ಪಾತ್ರ ಪಡೆದಿರುವ ಶ್ರದ್ಧಾ ತಮಿಳಿನಿಂದ ಕೂಡ ಅವಕಾಶ ಪಡೆಯುತ್ತಿದ್ದಾರಂತೆ. ಆದರೆ ಆ ಯೋಜನೆ ಇನ್ನೂ ಅಂತಿಮಗೊಳ್ಳಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com