ತಿಂಗಾ ತಿಂಗಳಿಗೂ ಚಂದದ ನಂಜನಗೂಡಿನಲ್ಲಿ 'ದೊಡ್ಮನೆ ಹುಡುಗ'

ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿರುವ 'ದೊಡ್ಮನೆ ಹುಡುಗ' ಚಿತ್ರೀಕರಣ ವಿದೇಶವನ್ನೆಲ್ಲಾ ಸುತ್ತಿ ಈಗ ನಂಜನಗೂಡಿನಲ್ಲಿ ಚಿತ್ರೀಕರಣ ಮುಗಿಸಿದೆ.
'ದೊಡ್ಮನೆ ಹುಡುಗ' ಚಿತ್ರೀಕರಣದಲ್ಲಿ ರವಿಶಂಕರ್, ಪುನೀತ್ ರಾಜಕುಮಾರ್, ಕೆ ಎಸ್ ಎಲ್ ಸ್ವಾಮಿ
'ದೊಡ್ಮನೆ ಹುಡುಗ' ಚಿತ್ರೀಕರಣದಲ್ಲಿ ರವಿಶಂಕರ್, ಪುನೀತ್ ರಾಜಕುಮಾರ್, ಕೆ ಎಸ್ ಎಲ್ ಸ್ವಾಮಿ

ಬೆಂಗಳೂರು: ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿರುವ 'ದೊಡ್ಮನೆ ಹುಡುಗ' ಚಿತ್ರೀಕರಣ ವಿದೇಶವನ್ನೆಲ್ಲಾ ಸುತ್ತಿ ಈಗ ನಂಜನಗೂಡಿನಲ್ಲಿ ಚಿತ್ರೀಕರಣ ಮುಗಿಸಿದೆ. ಆದರೆ ನಂಜನಗೂಡಿನಲ್ಲಿ ಚಿತ್ರೀಕರಣ ಮಾಡಲು ಪರವಾನಗಿ ಪಡೆಯುವುದು ಸ್ವಿಟ್ಸರ್ ಲ್ಯಾಂಡ್ ಗಿಂತಲು ಕಷ್ಟ ಎನ್ನುತ್ತಾರೆ ನಿರ್ದೇಶಕ.

ನಂಜನಗೂಡಿನ ಜಾತ್ರೆಯಲ್ಲಿ ಚಿತ್ರೀಕರಣ ಮಾಡಬೇಕೆಂದುಕೊಂಡಿದ್ದ ಸೂರಿ "ನಮ್ಮ ಸಿನೆಮಾಗೆ ನಂಜನಗೂಡು ಪ್ರಮುಖ ಪ್ರದೇಶ. ಜಾತ್ರೆಯನ್ನು ಸಿನೆಮಾ ಒಳಗೊಳ್ಳಬೇಕಿತ್ತು. ಆದುದರಿಂದ ಜಾತ್ರೆಯ ಸುತ್ತಮುತ್ತ ಚಿತ್ರೀಕರಣ ನಡೆಸಿದೆವು. ಆದರೆ ರಥ ಎಳೆಯಲು ನಮಗೆ ಅವಕಾಶ ನೀಡಲಿಲ್ಲ. ಅದಕ್ಕಾಗಿ ಅವರದ್ದೇ ಕೆಲವು ಜನರು ಇರುತ್ತಿದ್ದರು ಮತ್ತು ನಮಗೆ ಹಲವಾರು ನಿಬಂಧನೆಗಳನ್ನು ಹಾಕಲಾಯಿತು" ಎನ್ನುತ್ತಾರೆ ಸೂರಿ.

ಆದರೆ ತಂತ್ರಜ್ಞಾನಕ್ಕೆ ಧನ್ಯವಾದ ಹೇಳುವ ಸೂರಿ ನಂತರ ಜಾತ್ರೆಯ ದೃಶ್ಯಗಳನ್ನು ಮರು ಸೃಷ್ಟಿಸಲು ಸಾಧ್ಯವಾಯಿತು ಎನ್ನುತ್ತಾರೆ. "ಗ್ರಾಫಿಕ್ಸ್ ನಲ್ಲಿ ರಥದ ಚಕ್ರಗಳನ್ನು ಮರು ಸೃಷ್ಟಿಸಲು ಸಾಧ್ಯವಾಯಿತು. ಅದ್ಭುತವಾಗಿ ಮೂಡಿಬಂದಿದೆ" ಎನ್ನುತ್ತಾರೆ.

ಡಬ್ಬಿಂಗ್ ಹಂತದ ಪೂರ್ಣಗೊಂಡಿದ್ದು ಈಗ ಎರಡು ಹಾಡುಗಳ ಚಿತ್ರೀಕರಣವಷ್ಟೇ ಉಳಿದಿದೆಯಂತೆ. ಇದು ಪುನೀತ್ ಅವರ ೨೫ನೆಯ ಸಿನೆಮಾ ಆಗಿದ್ದು ಹೆಚ್ಚಿನ ನಿರೀಕ್ಷೆಗಳು ಗರಿಗೆದರಿವೆ.

ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ಕೃಷ್ಣ, ರವಿಶಂಕರ್, ರಂಗಾಯಣ ರಘು. ಚಿಕ್ಕಣ್ಣ ಹೀಗೆ ದೊಡ್ಡ ತಾರಾಗಣವೇ ಸಿನೆಮಾದಲ್ಲಿದೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com