ಮುಂಬಯಿ: ನಾನಿನ್ನು ಲೈಂಗಿಕತೆಯಲ್ಲಿ ತೊಡಗುವುದಿಲ್ಲ. ಮದುವೆ ಬೇಡವೇ ಬೇಡ, ಮಕ್ಕಳನ್ನು ಹೆರುವ ಇರಾದೆಯೂ ಇಲ್ಲ. ನಾನೀಗ ಹೋಲಿ ಮದರ್, ಎಲ್ಲರೂ ನನ್ನ ಮಕ್ಕಳು. ಎಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಬಿಗ್ ಬಾಸ್ ಸೀಸನ್-7 ಸ್ಪರ್ಧಿ ಹಾಗೂ ರೂಪದರ್ಶಿ ಸೋಫಿಯಾ ಹಯಾತ್ ಹೇಳಿದ್ದಾರೆ.
ಪವಿತ್ರ ಉದ್ದೇಶಕ್ಕಾಗಿ ಈ ಪರಿವರ್ತನೆ ಆಗಿದೆ, ರಾತ್ರೋ ರಾತ್ರಿ ನನ್ ಆಗಲು ಸಾಧ್ಯವಿಲ್ಲ,. ಎರಡು ವರ್ಷಗಳ ಹಿಂದೆಯೇ ಈ ಪ್ರಕ್ರಿಯೆ ಆರಂಭವಾಗಿತ್ತು ಎಂದು ಹೇಳಿದ್ದಾರೆ.
ಒಮ್ಮೆ ಸಂಬಂಧ ಕೆಟ್ಟಾಗ, ಆತ್ಮಹತ್ಯೆಗೆ ಯತ್ನಿಸಿದ್ದೆ. ಸತ್ತೆ ಹೋದೆ ಎಂದು ಭಾವಿಸಿದ್ದೆ, ಆಗ ನನ್ನಲಾದ ಬದಲಾವಣೆ ನನ್ನ ಜೀವನವನ್ನೇ ಬದಲಿಸಿತು. ಪ್ರಜ್ಞೆ ಬಂದ ನಂತರ ಚಿಕಿತ್ಸಕರ ಬಳಿ ತೆರಳಿದೆ. ಆಗ ಅವರು ನನ್ನಲಿರುವ ಅಗೋಚರ ಶಕ್ತಿಯ ಬಗ್ಗೆ ತಿಳಿಸಿದರು.
ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸಿರುವ ನಟಿ, ಮೇಕಪ್, ಪರ್ಫ್ಯೂಮ್ ಎಲ್ಲವನ್ನೂ ಬಿಟ್ಟಿದ್ದಾರಂತೆ. ಮೇಕಪ್ ಅಷ್ಟೇ ಅಲ್ಲ, ಮದುವೆ, ದೈಹಿಕ ಸುಖ, ಮಕ್ಕಳು, ಸಂಸಾರದ ಆಸೆಯನ್ನೂ ಬಿಟ್ಟಿದ್ದಾರಂತೆ ಸೋಫಿಯಾ ಮದರ್.
Advertisement