
ಬೆಂಗಳೂರು: 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ, 'ವಾಸ್ತು ಪ್ರಕಾರ', 'ರಿಕ್ಕಿ' ಸಿನೆಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ರಕ್ಷಿತ್ ಶೆಟ್ಟಿ ಮತ್ತೊಂದು ಮಹತ್ವದ ಬಿಡುಗಡೆಯ ಕಾತರದಲ್ಲಿದ್ದಾರೆ.
ಒಳ್ಳೆಯ ಸ್ಕ್ರಿಪ್ಟ್ ಗಳ ಆಯ್ಕೆಯಲ್ಲಿ ಎಂದಿಗೂ ಎಚ್ಚರದಿಂದಿರುವ ನಟ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ನಟಿಸಿರುವುದಕ್ಕೆ ಥ್ರಿಲ್ ಆಗಿದ್ದಾರೆ.
ಈ ಸಿನೆಮಾ ಪ್ರೇಕ್ಷಕರ ಇಡೀ ಕುಟುಂಬವನ್ನು ಸಿನೆಮಾ ಮಂದಿರಕ್ಕೆ ಎಳೆದು ತರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ರಕ್ಷಿತ್ "ನನಗೆ ಹೊಸ ಪ್ರೇಕ್ಷಕರನ್ನು ಸೃಷ್ಟಿಸಲು ಇಷ್ಟ. ಪ್ರತಿ ಸಿನೆಮಾದೊಂದಿಗೆ ಕನ್ನಡ ಸಿನೆಮಾಗಳನ್ನು ನೋಡಬಿಟ್ಟಿರುವ ಪ್ರೇಕ್ಷಕನನ್ನು ಮತ್ತೆ ಕರೆತರಲು ಬಯಸುತ್ತೇನೆ. 'ಗೋಧಿ ಬಣ್ಣ...' ಕೂಡ ಅಂತಹ ಒಂದು ಸಿನೆಮಾ, ಏಕೆಂದರೆ ಇದು ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತನಾಡುತ್ತದೆ. ಕಮರ್ಷಿಯಲ್ ಸಿನೆಮಾಗಳಿಂದ ಹೊಸ ಪೀಳೆಗೆಯ ಸಿನೆಮಾಗಳನ್ನು ಪ್ರಯತ್ನಿಸಿರುವ ನನ್ನನ್ನು ಈ ಹೊಸ ಪ್ರಯತ್ನ ಭಾಗವಾಗಿರುವುದಕ್ಕೂ ಜನ ಒಪ್ಪಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ" ಎನ್ನುತ್ತಾರೆ ನಟ.
ಆಲ್ಜೈಮರ್ ಖಾಯಿಲೆಯಿರುವ ಅನಂತನಾಗ್ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ "ಸಾಮಾನ್ಯವಾಗಿ ತಮ್ಮ ತಾಯಂದಿರೊಂದಿಗೆ ಗಂಡುಮಕ್ಕಳು ಮುಕ್ತ ಭಾವನೆಗಳೊಂಗಿದೆ ವ್ಯವಹರಿಸುತ್ತಾರೆ. ನನ್ನ ವಿಷಯದಲ್ಲೂ ಹಾಗೆಯೇ. ನನ್ನ ತಂದೆಯನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದೇ ಇಲ್ಲ" ಎನ್ನುವ ರಕ್ಷಿತ್ ಈ ಸಿನೆಮಾವನ್ನು ಅವರ ತಂದೆಗೆ ಅರ್ಪಿಸುತ್ತಿರುವುದಾಗಿ ತಿಳಿಸುತ್ತಾರೆ. "ಅವರಿಗೆ ನೇರವಾಗಿ ಹೇಳಲು ಸಾಧ್ಯವಿಲ್ಲದೇ ಹೋದರೂ ಈ ಚಿತ್ರದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಲಿದ್ದೇನೆ" ಎನ್ನುತ್ತಾರೆ.
ತಮ್ಮ ವೃತ್ತಿಜೀವನ ರೂಪುಗೊಳ್ಳುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುವ ರಕ್ಷಿತ್ "೨೦ ವರ್ಷದ ನಂತರ ಹಿಂತಿರುಗಿ ನೋಡಿದಾಗ, ನನ್ನ ಕೆಲಸದ ಬಗ್ಗೆ ಹೆಮ್ಮೆಯಿರಬೇಕು" ಎನ್ನುತ್ತಾರೆ.
Advertisement