ಕಂಗನಾ ರಣಾವತ್
ಸಿನಿಮಾ ಸುದ್ದಿ
ಕನ್ನಡದ ತಿಥಿ ಸಿನಿಮಾ ವೀಕ್ಷಿಸಿದ ಕಂಗನಾ
ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ರಾಮರೆಡ್ಡಿ ನಿರ್ದೇಶನದ ಕನ್ನಡದ ತಿಥಿ ಸಿನಿಮಾವನ್ನು ಬಾಲಿವುಡ್ ನ...
ಮುಂಬೈ: ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ರಾಮರೆಡ್ಡಿ ನಿರ್ದೇಶನದ ಕನ್ನಡದ ತಿಥಿ ಸಿನಿಮಾವನ್ನು ಬಾಲಿವುಡ್ ನ ಕಂಗನಾ ರಣಾವತ್ ಹಾಗೂ ಅನುರಾಗ್ ಕಶ್ಯಪ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಮುಂಬೈನಲ್ಲಿ ತಿಥಿ ಸಿನಿಮಾವನ್ನು ಮೇ 30ರಂದು ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಬಾಲಿವುಡ್ ನ ಹಲವು ಮಂದಿ ಚಿತ್ರಮಂದಿರಕ್ಕೆ ತೆರಳಿ ತಿಥಿ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಚಿತ್ರ ವೀಕ್ಷಿಸಿದ ಬಾಲಿವುಡ್ ಕಲಾವಿದರು ಮತ್ತು ತಂತ್ರಜ್ಞರು ಟ್ವೀಟ್ ಗಳ ಮೂಲಕ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ತಿಥಿ ಸಿನಿಮಮಾದ ಬಗ್ಗೆ ಕಂಗನಾ 'ಈವರೆಗೆ ಬೆಳ್ಳಿತೆರೆಯ ಮೇಲೆ ಇಂತಹದೊಂದು ಪ್ರಯೋಗ ನೋಡಿರಲಿಲ್ಲ. ಈ ಸಿನಿಮಾದ ಪಾತ್ರಗಳು ಬಹುಕಾಲ ನನ್ನ ಮನಸ್ಸಿನಲ್ಲುಳಿಯುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಮುಂಬೈನ ಚಿತ್ರಮಂದಿರದಲ್ಲಿ ತಿಥಿ ಸಿನಿಮಾ ವೀಕ್ಷಿಸಿದ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್, ತಿಥಿ ಒಂದು ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದು, ನೋಡಲೇಬೇಕಾದಂತ ಚಿತ್ರ ಎಂದು ಶ್ಲಾಘಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ