ತನ್ಮಯ್ ಭಟ್ ಯಾರೆಂದೇ ತಿಳಿದಿಲ್ಲ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಪ್ರತಿಕ್ರಿಯೆ

ಭಾರತ ರತ್ನಗಳಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮತ್ತು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ಅವರ ವಿರುದ್ಧ ವ್ಯಂಗ್ಯದ (ಬ್ಲಾಕ್ ಕಾಮಿಡಿ) ವಿಡಿಯೋ ಮಾಡಿ, ಯೂಟ್ಯೂಬ್ ನ
ಗಾನ ಕೋಗಿಲೆ ಲತಾ ಮಂಗೇಶ್ಕರ್
ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಭಾರತ ರತ್ನಗಳಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮತ್ತು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ಅವರ ವಿರುದ್ಧ ವ್ಯಂಗ್ಯದ (ಬ್ಲಾಕ್ ಕಾಮಿಡಿ) ವಿಡಿಯೋ ಮಾಡಿ, ಯೂಟ್ಯೂಬ್ ನ ಎಐಬಿ ಚಾನಲ್ ನಲ್ಲಿ ಪ್ರಸ್ತುತಪಡಿಸಿ ಬಹುಸಂಖ್ಯಾತ ಜನರ ತೀಕ್ಷ್ಣ ಟೀಕೆಗೆ ಗುರಿಯಾಗಿದ್ದ ತನ್ಮಯ್ ಭಟ್ ಮತ್ತು ಅವರ ವಿಡಿಯೋ ಬಗ್ಗೆ ಲತಾ ಮಂಗೇಶ್ಕರ್ ಪ್ರತಿಕ್ರಿಯಿಸಿದ್ದಾರೆ.

ತನ್ಮಯ್ ಭಟ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳೇ ನಡೆದಿದ್ದವು.

ಆದರೆ ಲತಾ ಅವರ ಪ್ರತಿಕ್ರಿಯೆ ದ್ವೇಶಪೂರಿತವಾಗಿರದೆ ತಣ್ಣನೆಯ ಮತ್ತು ಹಾಸ್ಯಭರಿತ ಮಾತುಗಳಲ್ಲಿ ತನ್ಮಯ್ ಭಟ್ ಯಾರೆಂದೇ ತಮಗೆ ತಿಳಿದಿಲ್ಲ ಎಂದಿದ್ದಾರೆ. ಅಂತರ್ಜಾಲ ತಾಡವೊಂದು ವರದಿ ಮಾಡಿರುವ ಲತಾ ಮಂಗೇಶ್ಕರ್ ಪ್ರತಿಕ್ರಿಯೆ ಇಂತಿದೆ "ನಾನು ವಿಡಿಯೋ ನೋಡಿಲ್ಲ, ಅದನ್ನು ನೋಡುವ ಮನಸು ಇಲ್ಲ. ಆದುದರಿಂದ ಅದರ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೂ ಹೋಗುವುದಿಲ್ಲ" ಎಂದಿರುವ ಅವರು "ಆಮೇಲೆ ನನಗೆ ಈ ತನ್ಮಯ್ ಭಟ್ ಯಾರೆಂದೂ ತಿಳಿದಿಲ್ಲ" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com