ಹಾರರ್ ಕಾರುಬಾರು; '6-5=2' ಮತ್ತು 'ಕರ್ವ' ನಿರ್ಮಾಪಕರಿಂದ ಮತ್ತೊಂದು ಚಿತ್ರ

'6-5=2' ಮತ್ತು 'ಕರ್ವ' ಚಿತ್ರನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ ಮೂಡಿಬರುತ್ತಿದ್ದು, ಪ್ರೇಕ್ಷಕರನ್ನು ಇದು ಇನ್ನು ಹೆಚ್ಚು ಬೆಚ್ಚಿಬೀಳಿಸಲಿದೆಯೇ? ಈ ಬಾರಿ ಡಾ. ಸೂರಿ,
ಇನ್ನು ಹೆಸರಿಡದ ಹಾರರ್ ಸಿನೆಮಾದ ಸ್ಟಿಲ್
ಇನ್ನು ಹೆಸರಿಡದ ಹಾರರ್ ಸಿನೆಮಾದ ಸ್ಟಿಲ್
Updated on
ಬೆಂಗಳೂರು: '6-5=2' ಮತ್ತು 'ಕರ್ವ' ಚಿತ್ರನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ ಮೂಡಿಬರುತ್ತಿದ್ದು, ಪ್ರೇಕ್ಷಕರನ್ನು ಇದು ಇನ್ನು ಹೆಚ್ಚು ಬೆಚ್ಚಿಬೀಳಿಸಲಿದೆಯೇ? ಈ ಬಾರಿ ಡಾ. ಸೂರಿ, ನಿರ್ಮಾಪಕ ಕೃಷ್ಣ ಚೈತನ್ಯ ಅವರ ಒಡಗೂಡಿ ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಅಡಿ ಇನ್ನು ಹೆಸರಿಡದ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. 
ಈ ಸಿನೆಮಾದ ಮೂಲಕ ನೂತನ ನಿರ್ದೇಶಕನ ಪರಿಚಯವೂ ಕನ್ನಡ ಚಿತ್ರರಂಗಕ್ಕೆ ಆಗಲಿದೆ. ವಿವಿ ಚಿತ್ರಕಥೆ ಕೂಡ ಬರೆದಿದ್ದು ನಿರ್ದೇಶನದ ಜವಾಬ್ದಾರಿಯನ್ನು ಹೊರಲಿದ್ದಾರೆ. "ವಿವಿ ಈ ಚಿತ್ರಕಥೆಯನ್ನು ಹಿಡಿದು ಡಾ. ಸೂರಿ ಅವರ ಬಳಿ ತೆರಳಿದ್ದರು ಮತ್ತು ನಿರ್ಮಾಪಕರು ಇದು ಕನ್ನಡದಲ್ಲಿ ವಿನೂತನ ಚಿತ್ರವಾಗಲಿದೆ ಎಂದು ಎಣಿಸಿದರು" ಎನ್ನುವ ಕೃಷ್ಣ "ಯುವ ನಿರ್ದೇಶಕ ಕಥೆ ಹೇಳಿದ ಮೇಲೆ ನಾನು ಒಪ್ಪಿಕೊಂಡೆ. ಚಿತ್ರೀಕರಣ ಬಹುತೇಕ ಮುಗಿದಿದ್ದು ಇನ್ನೈದು ದಿನವಷ್ಟೇ ಬಾಕಿಯಿದೆ" ಎನ್ನುತ್ತಾರೆ ಕೃಷ್ಣ . 
"ಈ ಸಿನೆಮಾ ಹಾರರ್ ಪ್ರಕಾರವನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ಯಲಿದೆ. ನನ್ನ ಹಿಂದಿನ  ಸಿನೆಮಾಗಳಾದ '6-5=2' ಮತ್ತು 'ಕರ್ವ' ಇವುಗಳಿಗಿಂತಲೂ ಒಂದು ಹಂತ ಮೇಲಕ್ಕೆ" ಎನ್ನುತ್ತಾರೆ ನಿರ್ಮಾಪಕ.
ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಸಿನೆಮಾ ಬಿಡುಗಡೆ ಮಾಡಲು ಎದುರು ನೋಡುತ್ತಿರುವ ನಿರ್ಮಾಪಕರು ಉತ್ತಮ ಶೀರ್ಷಿಕೆಯ ಹುಡುಕಾಟದಲ್ಲಿಯೂ ಇದ್ದಾರೆ. 
ಚೇತನ್ ಗಂಧರ್ವ ಜೊತೆಗೆ, ಅಮರ್, ಸಂಜೀವ್, ವರ್ಷ ಬಾಳಮ್ಮ ಮತ್ತು ಐಶ್ವರ್ಯ ಗೌಡ ಎಂಬ ಹೊಸ ನಟರನ್ನು ಕೂಡ ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ. "ಪ್ರವೀಣ್ ಪ್ರೇಮ್ ಎಂಬ ಹೊಸ ಹಾಸ್ಯನಟನನ್ನು ಕೂಡ ಈ ಸಿನೆಮಾದ ಮೂಲಕ ಪರಿಚಯಿಸಲಾಗುವುದು. ಇತರ ಭಾಷೆಯಲ್ಲಿ ನಟಿಸುತ್ತಿರುವ ಕೆಲವು ಯುವಕರು ಈ ಸಿನೆಮಾದ ಮೂಲಕ ಕನ್ನಡದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಅವರ ನಟನೆಯೆಲ್ಲ ಬಹಳ  ನೈಜವಾಗಿ ಮೂಡಿ ಬಂದಿದೆ" ಎನ್ನುತ್ತಾರೆ ಕೃಷ್ಣ. 
ನಂದ ಚಿತ್ರಕ್ಕೆ ಸಂಗೀತ ನೀಡಿದ್ದು ಸಂದೀಪ್ ಸದಾಶಿವ ಸಿನೆಮ್ಯಾಟೋಗ್ರಾಫರ್. 
ಮೂರನೇ ಬಾರಿಗೂ ಹಾರರ್ ಚಿತ್ರವೇಕೆ ಎಂದರೆ "ಹಲವರಿಗೆ ದೇವರು ಆಶೀರ್ವಾದ ಮಾಡಿದರೆ ನನಗೆ ದೆವ್ವದ ಆಶೀರ್ವಾದ ಇದೆ ಎಂದು ಹಲವಾರು ಹೇಳುತ್ತಾರೆ " ಎಂದು ಹಾಸ್ಯ ಚಟಾಕಿ ಹಾರಿಸುವ ಕೃಷ್ಣ "ಹಾರರ್ ನನ್ನನ್ನು ಬೆಂಬಲಿಸುವವರೆಗೆ ನಾನು ಅದರಲ್ಲಿ ಹೂಡಿಕೆ ಮಾಡುತ್ತಾ ಹೋಗುತ್ತೇನೆ" ಎನ್ನುತ್ತಾರೆ. "ವಿಷಯ ಸರಿಯಾಗಿದ್ದು, ಚಿತ್ರಕಥೆಯ ಪ್ರಮುಖ ಘಟ್ಟಗಳಲ್ಲಿ ಹಾರರ್ ಅಂಶಗಳಿದ್ದರೆ ಪ್ರೇಕ್ಷಕರಿಗೆ ಅದು ಇಷ್ಟವಾಗುವುದರಲ್ಲಿ ಸಂಶಯವಿಲ್ಲ" ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com