ಅತ್ಯುತ್ತಮ ಹೀರೋಗಳು ಸಾಮಾನ್ಯ ಮನುಷ್ಯರು: ನೀನಾಸಂ ಸತೀಶ್

ಸಿನೆಮಾರಂಗದಲ್ಲಿ ಎಂಟು ವಸಂತಗಳನ್ನು ಪೂರೈಸಿರುವ ನಟ ನೀನಾಸಂ ಸತೀಶ್, ಪಾತ್ರಗಳ ಆಯ್ಕೆಗಳಲ್ಲಿ ಎಚ್ಚರಿಕೆಯ ನಡೆಗಳನ್ನು ಇಡುತ್ತಿದ್ದಾರೆ. ಜಯತೀರ್ಥ ನಿರ್ದೇಶನದ 'ಬ್ಯುಟಿಫುಲ್ ಮನಸುಗಳು' ಸಿನೆಮಾದಲ್ಲಿ
ನೀನಾಸಂ ಸತೀಶ್
ನೀನಾಸಂ ಸತೀಶ್
Updated on
ಬೆಂಗಳೂರು: ಸಿನೆಮಾರಂಗದಲ್ಲಿ ಎಂಟು ವಸಂತಗಳನ್ನು ಪೂರೈಸಿರುವ ನಟ ನೀನಾಸಂ ಸತೀಶ್, ಪಾತ್ರಗಳ ಆಯ್ಕೆಗಳಲ್ಲಿ ಎಚ್ಚರಿಕೆಯ ನಡೆಗಳನ್ನು ಇಡುತ್ತಿದ್ದಾರೆ. ಜಯತೀರ್ಥ ನಿರ್ದೇಶನದ 'ಬ್ಯುಟಿಫುಲ್ ಮನಸುಗಳು' ಸಿನೆಮಾದಲ್ಲಿ ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ನಟಿಸಿದ್ದರೆ, ಜಾಕೋಬ್ ವರ್ಗಿಸ್ ನ 'ಚಂಬಲ್' ಸಿನೆಮಾದಲ್ಲಿ ಲವರ್ ಬಾಯ್ ಪಾತ್ರ ನಿರ್ವಹಿಸಿದ್ದಾರೆ. ರವಿ ಶ್ರೀವತ್ಸ ಅವರ 'ಟೈಗರ್ ಗಲ್ಲಿ' ಯಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. 
"ಸ್ಲಮ್ ನ ಸರಳ ಹುಡುಗನ ಹಾಗು ಮೊದಲ ಬಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ನಿರ್ವಹಿಸಿದ್ದೇನೆ" ಎನ್ನುತ್ತಾರೆ ಸತೀಶ್. ಈ ಪಾತ್ರಗಳನ್ನು ಆಯ್ಕೆ ಮಾಡಿಕೊಂಡದ್ದೇಕೆ ಎಂಬ ಪ್ರಶ್ನೆಗೆ "ಸತೀಶನಿಗೆ ತನ್ನ ಮಾಮೂಲಿ ಪಾತ್ರಗಳನ್ನೂ ತೊರೆದು ಹೊಸ ಪಾತ್ರಗಳನ್ನು ಹುಡುಕುವ ಆಸಕ್ತಿ ಬಂದಿದೆ" ಎನ್ನುವ ನಟ "ನನ್ನದೇ ಸಿನೆಮಾಗಳಲ್ಲಿ ಹೀರೊ ಆಗಿ ನಟಿಸಲು ಸಂತಸವಾಗಿತ್ತು, ಈಗ ಹೊಸರೀತಿಯ ಪಾತ್ರಗಳಲ್ಲಿ ನಟಿಸುವಾಸೆ" ಎನ್ನುತ್ತಾರೆ. 
ತಾವು ನಟಿಸುವ ಪಾತ್ರಗಳಿಂದಲೇ ಹೀರೋಗಳನ್ನು ಜನ ನೆನಪಿಸಿಕೊಳ್ಳುವುದು ಎನ್ನುವ ಸತೀಶ್, ಆ ಪಾತ್ರಗಳಲ್ಲಿ ಕೊಂಚ ನೈಜತೆಯು ಇರುವದು ಮುಖ್ಯ ಎಂದು ನಂಬುತ್ತಾರೆ. "ನಾನು ನಟಿಸುವ ಪಾತ್ರಗಳು ಭೂಮಿಯ ಮೇಲೆ ಜೀವಿಸುವ ಯಾವುದಾದರೂ ವ್ಯಕ್ತಿಯನ್ನು ಪ್ರತಿಫಲಿಸಬೇಕು" ಎನ್ನುವ ನಟ "ಆದುದರಿಂದಲೇ ನಾನು ವಿವಿಧ ರೀತಿಯ ಪಾತ್ರಗಳನ್ನೂ ಆಯ್ಕೆ ಮಾಡುವುದು ಮತ್ತು ಸದಾ ಪ್ರೇಕ್ಷಕರ ಜೊತೆಗೆ ಸಂಪರ್ಕದಲ್ಲಿರುವುದು" ಎನ್ನುತ್ತಾರೆ. 
ಅವರೇ ನಿರ್ಮಿಸಿ ನಟಿಸಿದ್ದ 'ರಾಕೆಟ್' ನಂತರ ವಿರಾಮದಲ್ಲಿದ್ದ ನಟ "ರಾಕೆಟ್ ನಂತರ ಸಣ್ಣ ವಿರಾಮ ತೆಗೆದುಕೊಂಡೆ. ಈ ಸಮಯದಲ್ಲಿ ಭಾರತದ ಮತ್ತು ವಿದೇಶಗಳ ಸಾಕಷ್ಟು ಸಿನೆಮಾಗಳನ್ನು ನೋಡಿದೆ. ಹಾಗೆಯೇ ನಮ್ಮ ದಂತಕತೆಗಳಾದ ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಇವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳ ಬಗ್ಗೆ ನನ್ನದೇ ಅಧ್ಯಯನ ಮಾಡಿದೆ. ಮತ್ತು ಆ ಪಾತ್ರಗಳು ಇಂದಿನವರೆಗೆ ಉಳಿದುಕೊಂಡಿರುವುದೇಕೆ ಎಂಬುದರ ಬಗ್ಗೆ ಚಿಂತಿಸಿದೆ. ನಾವುಗಳು ಅಂತಹ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲವೇಕೆ. ನಾವು ಕೇಳು ಕಥೆಗಳಲ್ಲಿ ಇಷ್ಟೊಂದು ನಿರ್ಬಂಧಗಳೇಕೆ? ಈ ಪ್ರಶ್ನೆಗಳು ನನ್ನ ತಲೆಯಲ್ಲಿ ಸುತ್ತುತ್ತಿದ್ದವು. ನನಗೆ ಹಿಂದುಳಿಯಲು ಇಷ್ಟವಾಗಲಿಲ್ಲ" ಎನ್ನುತ್ತಾರೆ ಸತೀಶ್.
"ಹೊಸ ನಿರ್ದೇಶಕರು ಕನ್ನಡದಲ್ಲಿ ಹೊಸ ಬಗೆಯ ಸ್ಕ್ರಿಪ್ಟ್ ಗಳೊಂದಿಗೆ ಹಲವು ಪ್ರಯೋಗಗಳನ್ನು ನಡೆಸುತ್ತಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ಪ್ರೇಕ್ಷಕರು ಕೂಡ ಬದಲಾಗುತ್ತಿದ್ದಾರೆ. ನಾವು ಕೂಡ ಬದಲಾಗಿ ಹೊಸತುಗಳನ್ನು ಪರೀಕ್ಷಿಸಲು ಇದು ಸಕಾಲ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com