ಮಾಸ್ತಿ ಗುಡಿ ದುರಂತ: ಬಡಮಕ್ಕಳನ್ನು ನೀರಿಗೆ ತಳ್ಳಿ ಆಳ ನೋಡಿಬಿಟ್ಟೆಯಲ್ಲಾ ರವಿವರ್ಮಾ- ಜಗ್ಗೇಶ್

'ನೀನು ಅಡಿಮಟ್ಟದಿಂದ ಬಂದವನಾಗಿ ಬಡವರಮಕ್ಕಳ ತಳ್ಳಿ ಆಳನೋಡಿಬಿಟ್ಟೆಯಲ್ಲಾ ರವಿವರ್ಮಾ. ದಿಕ್ಕಾರವಿರಲಿ ನಿನ್ನಡಬ್ಬ ಸಾಹಸಕ್ಕೆ! ...
ಅನಿಲ್ - ಉದಯ್
ಅನಿಲ್ - ಉದಯ್
Updated on
ಬೆಂಗಳೂರು: 'ನೀನು ಅಡಿಮಟ್ಟದಿಂದ ಬಂದವನಾಗಿ ಬಡವರಮಕ್ಕಳ ತಳ್ಳಿ ಆಳನೋಡಿಬಿಟ್ಟೆಯಲ್ಲಾ ರವಿವರ್ಮಾ. ದಿಕ್ಕಾರವಿರಲಿ ನಿನ್ನಡಬ್ಬ ಸಾಹಸಕ್ಕೆ! ಅಯ್ಯೋ ದೇವರೆ ನಾನುಕಂಡ ಬಡಮಕ್ಕಳು ಹೋಗಿಬಿಟ್ಟರು' ಎಂದು ಹಿರಿಯ ನಟ ಜಗ್ಗೇಶ್ ಅವರು ಮಾಸ್ತಿ ಗುಡಿ ಚಿತ್ರದ ವೇಳೆ ಹೆಲಿಕಾಪ್ಟರ್ ನಿಂದ ಕೆರೆಗೆ ಜಿಗಿದು ಪ್ರಾಣ ಕಳೆದುಕೊಂಡ ಇಬ್ಬರು ಖಳನಟರ ಬಗ್ಗೆ ಟ್ವಿಟರ್ ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ ಖಳನಟರಾದ ಅನಿಲ್ ಮತ್ತು ಉದಯ್ ಅವರು ಮೃತಪಟ್ಟಿದ್ದು, ಈ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಅವರು, ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹದಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣಮುಂದಿದೆ. ಎದುರಿಗೆ ಸಿಕ್ಕರೆ ಬಾಯ್ ತುಂಬ ಅಣ್ಣಾಅಂತ ತಬ್ಬುತ್ತಿದ್ದರು. ಹೆಣವಾದರೆ... ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com