ಭಾರತದಲ್ಲಿ ಸಾಹಸ ಚಿತ್ರೀಕರಣದ ಗುಣಮಟ್ಟ ಉತ್ತಮವಾಗಿಲ್ಲ: ಜಾನ್ ಅಬ್ರಹಾಂ

ಬಾಲಿವುಡ್ ಸಿನೆಮಾಗಳಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದಕ್ಕೆ ಪ್ರಸಿದ್ಧವಾಗಿರುವ ನಟ ಜಾನ್ ಅಬ್ರಹಾಂ, ಭಾರತದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಉತ್ತಮ ದರ್ಜೆಯದ್ದಲ್ಲ
ಬಾಲಿವುಡ್ ನಟ ಜಾನ್ ಅಬ್ರಹಾಂ
ಬಾಲಿವುಡ್ ನಟ ಜಾನ್ ಅಬ್ರಹಾಂ
Updated on
ನವದೆಹಲಿ: ಬಾಲಿವುಡ್ ಸಿನೆಮಾಗಳಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದಕ್ಕೆ ಪ್ರಸಿದ್ಧವಾಗಿರುವ ನಟ ಜಾನ್ ಅಬ್ರಹಾಂ, ಭಾರತದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಉತ್ತಮ ದರ್ಜೆಯದ್ದಲ್ಲ ಎಂದಿದ್ದಾರೆ. 
ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನೆಮಾದ ಚಿತ್ರೀಕರಣದ ವೇಳೆ ಹೆಲಿಕ್ಯಾಪ್ಟರ್ ನಿಂದ ನೀರಿಗೆ ಜಿಗಿಯುವ ಸ್ಟಂಟ್ ಮಾಡಲು ಹೋಗಿ ಇಬ್ಬರು ಉದಯೋನ್ಮಖ ಕಲಾವಿದರು ಅಸು ನೀಗಿದ ಘಟನೆ ನಡೆದಿರುವ ಹಿನ್ನಲೆಯಲ್ಲಿ ಜಾನ್ ಅಬ್ರಹಾಂ ಈ ಪ್ರತಿಕ್ರಿಯೆ ನೀಡಿದ್ದಾರೆ. 
ಈ ಸುದ್ದಿ ದುಃಖ ತಂದಿದೆ ಎಂದು ಕೂಡ ಜಾನ್ ಹೇಳಿದ್ದಾರೆ. 
"ಕನ್ನಡ ನಟರು ಜೀವ ಕಳೆದುಕೊಂಡ ಸುದ್ದಿ ಕೇಳಿ ನಾನು ತತ್ತರಿಸಿ ಹೋಗಿದ್ದೇನೆ. ನಾನು ಆ ದೃಶ್ಯಾವಳಿ ವೀಕ್ಷಿಸಿದೆ. ಇದು ನಿಜಕ್ಕೂ ಖಂಡನೀಯ ಮತ್ತು ನಿರ್ಮಾಪಕರನ್ನು ಜೈಲಿಗೆ ಹಾಕಬೇಕು" ಎಂದು ಜಾನ್ ಹೇಳಿದ್ದಾರೆ. 
ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ನಡೆದ ಈ ದುರ್ಘಟನೆಯಲ್ಲಿ ಉದಯ್ ಮತ್ತು ಅನಿಲ್ ಪ್ರಾಣ ಕಳೆದುಕೊಂಡಿದ್ದರು. 
ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಂಡರೂ ಗಾಯಗಳಾಗುತ್ತವೆ ಆದರೆ ಭಾರತೀಯ ಚಿತ್ರರಂಗದಲ್ಲಿ ಸುರಕ್ಷತೆಯ ಕ್ರಮಗಳು ಇನ್ನು ಹೆಚ್ಚಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com