ಆದಿವಾಸಿ ಕೊಲೆ ಆರೋಪದಲ್ಲಿ ಡಿ ಯು ಮತ್ತು ಜೆ ಎನ್ ಯು ಪ್ರಾಧ್ಯಾಪಕರ ವಿರುದ್ಧ ಪ್ರಕರಣ

ಛತ್ತೀಸ್ ಘರ್ ನ ನಕ್ಸಲ್ ಪೀಡಿತ ಪ್ರದೇಶದಲ್ಲಿ ಆದಿವಾಸಿ ಗ್ರಾಮಸ್ಥರೊಬ್ಬರ ಕೊಲೆ ಪ್ರಕರಣದಲ್ಲಿ ಕೆಲವು ಮಾವೋವಾದಿಗಳ ಜೊತೆಗೆ ದೆಹಲಿ ವಿಶ್ವವಿದ್ಯಾಲಯ (ಡಿ ಯು) ಮತ್ತು ಜವಾಹಾರ್ ನೆಹರು ವಿಶ್ವವಿದ್ಯಾಲಯ
ಡಿ ಯು ಪ್ರಾಧ್ಯಾಪಕಿ ನಂದಿನಿ ಸುಂದರ್
ಡಿ ಯು ಪ್ರಾಧ್ಯಾಪಕಿ ನಂದಿನಿ ಸುಂದರ್
ರಾಯಪುರ: ಛತ್ತೀಸ್ ಘರ್ ನ ನಕ್ಸಲ್ ಪೀಡಿತ ಪ್ರದೇಶದಲ್ಲಿ ಆದಿವಾಸಿ ಗ್ರಾಮಸ್ಥರೊಬ್ಬರ ಕೊಲೆ ಪ್ರಕರಣದಲ್ಲಿ ಕೆಲವು ಮಾವೋವಾದಿಗಳ ಜೊತೆಗೆ ದೆಹಲಿ ವಿಶ್ವವಿದ್ಯಾಲಯ (ಡಿ ಯು) ಮತ್ತು ಜವಾಹಾರ್ ನೆಹರು ವಿಶ್ವವಿದ್ಯಾಲಯ (ಜೆ ಎನ್ ಯು) ಪ್ರಾಧ್ಯಾಪಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
"ಡಿ ಯು ಪ್ರಾಧ್ಯಾಪಕಿ ನಂದಿನಿ ಸುಂದರ್, ಅರ್ಚನಾ ಪ್ರಸಾದ್ (ಜೆ ಎನ್ ಯು ಪ್ರಾಧ್ಯಾಪಕಿ), ವಿನೀತ್ ತಿವಾರಿ (ದೆಹಲಿಯ ಜೋಶಿ ಅಧಿಕಾರ್ ಸಂಸ್ಥೆಯ ಅಧಿಕಾರಿ), ಸಂಜಯ್ ಪರತೆ (ಛತ್ತೀಸ್ ಘರ್ ಸಿ ಪಿ ಐ ಮಾರ್ಕ್ಸಿಸ್ಟ್ ರಾಜ್ಯ ಕಾರ್ಯದರ್ಶಿ) ಮತ್ತು ಇತರ ಮಾವೋವಾದಿಗಳ ವಿರುದ್ಧ, ಕೊಲೆಯಾದ ಶಮಂತ್ ಬಘೇಲ್ ಪತ್ನಿ ನೀಡಿರುವ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಬಸ್ತರ್ ಪ್ರದೇಶದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಸ್ ಆರ್ ಪಿ ಕಲ್ಲೂರಿ ಹೇಳಿದ್ದಾರೆ. 
ಕೊಲೆ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ತೊಂಗಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು "ತನಿಖೆಯಲ್ಲಿ ಇವರುಗಳ ತಪ್ಪು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಐ ಜಿ ಹೇಳಿದ್ದಾರೆ. 
ಶನಿವಾರವೇ ಈ ಪ್ರಕರಣ ದಾಖಲಾಗಿದ್ದರು, ಇದು ಕಳೆದ ರಾತ್ರಿಯಷ್ಟೇ ಬೆಳಕಿಗೆ ಬಂದಿದೆ. 
ಶುಕ್ರವಾರ ರಾತ್ರಿ ನಕ್ಸಲರು ಬಘೇಲ್ ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವರ್ಷ ಏಪ್ರಿಲ್ ನಿಂದಲೂ ನಕ್ಸಲ್ ಚಟುವಟಿಕೆಗಳ ವಿರುದ್ಧ ಬಘೇಲ್ ಮತ್ತು ಸಹಚರರು ಪ್ರತಿಭಟನೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. 
ಈ ಹಿಂದೆ ಬಘೇಲ್ ಮತ್ತು ಇತರ ಗ್ರಾಮಸ್ಥರು ಸುಂದರ್, ಪ್ರಸಾದ್, ತಿವಾರಿ, ಪರತೆ ವಿರುದ್ಧ ತೊಂಗಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com