ಸ್ಟಂಟ್ ನಟರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿ: ಮಾಧವನ್

ಮಾಸ್ತಿಗುಡಿ ಕನ್ನಡ ಸಿನೆಮಾ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟ ಇಬ್ಬರು ನಟರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್
ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್
ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್
Updated on
ಮುಂಬೈ: ಮಾಸ್ತಿಗುಡಿ ಕನ್ನಡ ಸಿನೆಮಾ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟ ಇಬ್ಬರು ನಟರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್, ಸ್ಟಂಟ್ ಕಲಾವಿದರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಆಗ್ರಹಸಿದ್ದಾರೆ. 
ತಿಪ್ಪಗೊಂಡನಹಳ್ಳಿ ಕೆರೆಯ ಮೇಲೆ ಹೆಲಿಕ್ಯಾಪ್ಟರ್ ನಿಂದ ಇಳಿಯುವ ಸ್ಟಂಟ್ ನಿರ್ವಹಿಸುವಾಗ, ನೀರಿಗೆ ಧುಮುಕಿ ಈಜಲಾರದೆ ನಟರಾದ ಉದಯ್ ಮತ್ತು ಅನಿಲ್ ಮೃತಪಟ್ಟಿದ್ದರು. ಇದಾದ ಒಂದು ದಿನದ ನಂತರ ಮಂಗಳವಾರ ಸಂಜೆ ಆರ್ ಮಾಧವನ್ ಟ್ವೀಟ್ ಮಾಡಿದ್ದು ಈ ಸುದ್ದಿ ಅತೀವ ದುಃಖ ತಂದಿದೆ ಎಂದಿದ್ದಾರೆ. 
"ಇದರಿಂದ ನಿಜಕ್ಕೂ ದುಃಖವಾಗಿದೆ. ನನ್ನ ಸಂತಾಪಗಳು ಮತ್ತು ಎಲ್ಲ ಸ್ಟಂಟ್ ಕಲಾವಿದರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ. 
ಇದೆ ಸಮಯದಲ್ಲಿ ತಮಿಳು ನಟ ಸೂರ್ಯ ಶಿವಕುಮಾರ್ ಕೂಡ ಟ್ವೀಟ್ ಮಾಡಿಡ್ಡಿ "ಬಹಳ ದುಃಖಗೊಂಡಿದ್ದೇನೆ. ವಿ ಎಫ್ ಎಕ್ಸ್ (ಗ್ರಾಫಿಕ್ಸ್) ಯುಗದಲ್ಲಿ ಇದು ದುರದೃಷ್ಟ. ಚಿತ್ರತಂಡದ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಇದು ಸೂಕ್ತ ಸಮಯ. ಮೃತಪಟ್ಟವರ ಕುಟುಂಬ ವರ್ಗಕ್ಕೆ ನನ್ನ ತಾಪಗಳು" ಎಂದಿದ್ದು ಅದನ್ನು ಮರುಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com