ಶಿವರಾಜ್ ಕುಮಾರ್, ವಿದ್ಯಾ ಪ್ರದೀಪ್, ವಿಶಾಲ್ ಹೆಗಡೆ, ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಇಡೀ ಚಿತ್ರತಂಡ ಹಸಿರುವ ಪ್ರದೇಶದಲ್ಲಿ ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಕ್ಕೆ ನಿರ್ದೇಶಕ ಯೋಗಿ ಜಿ ರಾಜ್ ಉತ್ಸಾಹದಿಂದಿದ್ದಾರೆ. ಈ ಹಂತದ ಚಿತ್ರೀಕರಣದ ಬಗ್ಗೆ ಮಾತನಾಡುವ ನಿರ್ದೇಶಕ "ರಾಜಕುಮಾರ್ ನಟನೆಯ 'ಬಂಗಾರದ ಮನುಷ್ಯ' ಸಿನೆಮಾಗೂ ಈ ಸಿನೆಮಾದ ಕಥೆಗೂ ಯಾವುದೇ ಸಂಬಂಧವಿಲ್ಲ. ನಾನು ನನ್ನ ಸಿನೆಮಾವನ್ನು ದೇಶದ ರೈತರಿಗೆ ಅರ್ಪಿಸುತ್ತಿದ್ದೇನೆ. ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಿರುವ "ತೆನೆಗೆ ತೆನೆ ಸಿಹಿ ಮುತ್ತು, ಹೊಸ ಗಾಳಿ ಬೀಸುವಾಗ... ಬೆವರ ಹನಿ ನಮಗ್ಗೊತ್ತು.. ರೈತ ನಮ್ಮ ತಾಯಿಯಂತೆ.. ಅವನ ಆಸ್ತಿ ನೇಗಿಲು' ಹಾಡು ರೈತರ ಗೌರವಸೂಚಕವಾಗಿ ಬರೆದಿರುವುದು" ಎಂದು ಹೇಳಿದ್ದಾರೆ.