ಐ ಸಿ ಎಫ್ ಟಿ ಯುನೆಸ್ಕೊ ಗಾಂಧಿ ಪದಕಕ್ಕೆ ನಾಮಾಂಕಿತಗೊಂಡ ಅಲ್ಲಮ

೧೨ ನೇ ಶತಮಾನದ ಸಂತಕವಿ ಅಲ್ಲಮಪ್ರಭುವಿನ ಬಗ್ಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ನಿರ್ದೇಶಿಸಿರುವ ಚಿತ್ರ ಗೋವಾದ ೪೭ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಐ ಸಿ ಎಫ್ ಟಿ ಯುನೆಸ್ಕೊ
ಅಲ್ಲಮ ಸಿನೆಮಾದ ಪೋಸ್ಟರ್
ಅಲ್ಲಮ ಸಿನೆಮಾದ ಪೋಸ್ಟರ್
ಬೆಂಗಳೂರು: ೧೨ ನೇ ಶತಮಾನದ ಸಂತಕವಿ ಅಲ್ಲಮಪ್ರಭುವಿನ ಬಗ್ಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ನಿರ್ದೇಶಿಸಿರುವ ಚಿತ್ರ ಗೋವಾದ ೪೭ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಐ ಸಿ ಎಫ್ ಟಿ ಯುನೆಸ್ಕೊ ಗಾಂಧಿ ಪದಕಕ್ಕೆ ಸ್ಪರ್ಧಿಸಲಿದೆ. 
ಗಾಂಧಿ ಅವರ ಆದರ್ಶಗಳಾದ ಶಾಂತಿ, ಅಹಿಂಸೆ ಮತ್ತು ಸಹಿಷ್ಣುತೆಯನ್ನು ಎತ್ತಿ ಹಿಡಿಯುವ ಸಿನೆಮಾಗಳಿಗೆ ಐ ಸಿ ಎಫ್ ಟಿ ಪ್ಯಾರಿಸ್ ಮತ್ತು ಯುನೆಸ್ಕೊ ಜಂಟಿಯಾಗಿ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡುತ್ತದೆ. ಈ ವಿಭಾಗದ ಸ್ಪರ್ಧೆಯಲ್ಲಿ 'ಅಲ್ಲಮ' ಒಳಗೊಂಡಂತೆ ೮ ಸಿನೆಮಾಗಳಿವೆ. 
ಒಂಭತ್ತು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗಾಭರಣ ಇದರ ಬಗ್ಗೆ ಮಾತನಾಡುತ್ತ "ಇದಕ್ಕಾಗಿ ಇಡೀ ಅಲ್ಲಮ ಚಿತ್ರತಂಡ ಧನ್ಯವಾದ ಮತ್ತು ಅಭಿನಂದನೆಗಳನ್ನು ತಿಳಿಸಬೇಕು. ೧೨ ನೇ ಶತಮಾನದ ಸಂತ ಕವಿ, ಯೋಗಿ ಅಲ್ಲಮನ ಸತ್ಯದ ಅರಿವು, ಆತ್ಮ ಶೋಧ ಮತ್ತು ಸಾರ್ವರ್ತ್ರಿಕ ಭ್ರಾತೃತ್ವ ಇಂದಿನಸ ಸಮಾಜಕ್ಕೆ ಬಹಳ ಅಗತ್ಯವಿದೆ. ಅಲ್ಲಮ ತೀವ್ರತಮ ಬಯೋಪಿಕ್ ಮತ್ತು ಇದರ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ" ಎನ್ನುತ್ತಾರೆ. 
ಈ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಇತರ ಚಿತ್ರಗಳು ಎ ರಿಯಲ್ ವೆರ್ಮೆರ್, ಬೆಳುಗ, ಕೋಲ್ಡ್ ಆಡ್ ಕಲಂದರ್, ಎಕ್ಸೈಲ್ಡ್, ಹಾರ್ಮೊನಿಯ, ಡಾ ಅಪಾಲಜಿ ಅಂಡ್ ದ ಫ್ಯಾಮಿಲಿ: ಡಿಮೆನ್ಷಿಯಾ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com