ನಟಿ ಶ್ರದ್ಧಾ ಶ್ರೀನಾಥ್
ಸಿನಿಮಾ ಸುದ್ದಿ
ಮಾಧವನ್ ಜೊತೆ ತಮಿಳು ಸಿನೆಮಾದಲ್ಲಿ ಕನ್ನಡ ನಟಿ ಶ್ರದ್ಧಾ ಶ್ರೀನಾಥ್
ತಮಿಳು ನಟ ಆರ್ ಮಾಧವನ್ ನಟಿಸುತ್ತಿರುವ ಭೂಗತ ವಿಷಯದ ಸಿನೆಮಾ 'ವಿಕ್ರಂ ವೇಧಾ' ದಲ್ಲಿ ನಟಿಸುತ್ತಿರುವುದಕ್ಕೆ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಉತ್ಸುಕರಾಗಿದ್ದು, ನಟನ ಸರಳತೆಗೆ ಮಾರುಹೋಗಿದ್ದಾಗಿ
ಚೆನ್ನೈ: ತಮಿಳು ನಟ ಆರ್ ಮಾಧವನ್ ನಟಿಸುತ್ತಿರುವ ಭೂಗತ ವಿಷಯದ ಸಿನೆಮಾ 'ವಿಕ್ರಂ ವೇಧಾ' ದಲ್ಲಿ ನಟಿಸುತ್ತಿರುವುದಕ್ಕೆ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಉತ್ಸುಕರಾಗಿದ್ದು, ನಟನ ಸರಳತೆಗೆ ಮಾರುಹೋಗಿದ್ದಾಗಿ ಹೇಳಿದ್ದಾರೆ.
"ನಾನು ಸಾಕಷ್ಟು ಉತ್ಸುಕಳಾಗಿದ್ದೇನೆ. ನಾನು ಅವರನ್ನು(ಮಾಧವನ್) ಈಗಾಗಲೇ ಒಮ್ಮೆ ಭೇಟಿ ಮಾಡಿದ್ದೇನೆ. ಅವರ ಸರಳತೆಗೆ ಮಾರುಹೋಗಿದ್ದಲ್ಲದೆ ಅವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವ ಮೂಡಿತು" ಎಂದು ಶ್ರದ್ಧಾ ಹೇಳಿದ್ದಾರೆ.
ನಿರ್ದೇಶಕ ಜೋಡಿ ಪುಷ್ಕರ್-ಗೋಯಲ್ ಈ ಸಿನೆಮಾವನ್ನು ನಿರ್ದೇಶಿಸುತ್ತಿದ್ದಾರೆ.
ಜೊತೆಗೆ ಶ್ರದ್ಧಾ ತಮಿಳು ನಟ ವಿಜಯ್ ಸೇತುಪತಿ ಅವರೊಂದಿಗೂ ತೆರೆ ಹಂಚಿಕೊಳ್ಳಲಿದ್ದಾರೆ.
"ನಾನು ಇತ್ತೀಚೆಗಷ್ಟೇ ವಿಜಯ್ ಸೇತುಪತಿ ಅವರ ಸಿನೆಮಾಗಳನ್ನೆಲ್ಲಾ ನೋಡಿ ಮುಗಿಸಿದೆ ಮತ್ತು ಅವರ ಜೊತೆಗೂ ಕೆಲಸ ಮಾಡಲು ಕಾಯುತ್ತಿದ್ದೆ" ಎನ್ನುತ್ತಾರೆ ನಟಿ.
ಸದ್ಯಕ್ಕೆ ನಟಿ ತಮಿಳು ಸಿನೆಮಾ 'ಇವನ್ ತಂತಿರನ್' ನಲ್ಲಿ ನಿರತರಾಗಿದ್ದಾರೆ ಹಾಗು ಮಣಿರತ್ನಂ ಅವರ 'ಕಾಟ್ರು ವೇಳೆಯಿದೈ'ನಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ಊರ್ವಿ' ಬಿಡುಗಡೆಯಾಗಬೇಕಿದ್ದರೆ, 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ