'ಮುತ್ತಿನ ಹಾರ'ದಲ್ಲಿ ಹಾಡಲು ಮೊದಲು ಒಪ್ಪಿರಲಿಲ್ಲ, ನಂತರ ಸಮ್ಮತಿಸಿದರು

ಪಂಡಿತ್ ಡಾ.ಬಾಲಮುರುಳಿ ಕೃಷ್ಣ ಕನ್ನಡ ಸಿನಿಮಾದ ಸುಮಾರು 13 ಹಾಡುಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ..
ಡಾ.ಬಾಲಮುರುಳಿಕೃಷ್ಣ
ಡಾ.ಬಾಲಮುರುಳಿಕೃಷ್ಣ

ಬೆಂಗಳೂರು: ಪಂಡಿತ್ ಡಾ.ಬಾಲಮುರುಳಿ ಕೃಷ್ಣ ಕನ್ನಡ ಸಿನಿಮಾದ ಸುಮಾರು 13 ಹಾಡುಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಸಂದ್ಯಾರಾಗ ಸಿನಿಮಾದಲ್ಲಿ ಪಂಡಿತ್ ಭೀಮಸೇನ ಜೋಶಿ ಅವರ ಜೊತೆ ಈ ಪರಿಯ ಸೊಬಗು ಎಂಬ ಹಾಡನ್ನು ಜುಗಲ್ ಬಂದಿಯಲ್ಲಿ ಹಾಡಿದ್ದಾರೆ. ಹಂಸಗೀತೆ ಎಂಬ ಸಂಗೀತ ಪ್ರಧಾನ ಚಿತ್ರದ ಹಿನ್ನೆಲೆ ಗಾಯನಕ್ಕಾಗಿ 1976 ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

ಸಿನಿಮಾ ಹಾಡುಗಳಲ್ಲಿ ಅವರು ಹೆಚ್ಚು ಹಿನ್ನೆಲೆ ಗಾಯನ ನೀಡಲು ಇಚ್ಚಿಸಿರಲಿಲ್ಲ. 1990 ರಲ್ಲಿ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಅಭಿನಯದ ಮುತ್ತಿನ ಹಾರ ಸಿನಿಮಾದಲ್ಲಿ  'ದೇವರು ಹೊಸೆದ ಪ್ರೇಮದ ದಾರ' ಹಾಡಿಗಾಗಿ ವಿಭಿನ್ನ ಧ್ವನಿಗಾಗಿ ಹುಡುಕಾಟ ನಡೆಸುತ್ತಿದ್ದೆವು,  ಬಾಲಸುಬ್ರಮಣ್ಯ, ಮನ್ನಾ ಡೇ, ಯೇಸುದಾಸ್ ಹೆಸರುಗಳು ನಮ್ಮ ಮನಸಲ್ಲಿ ಬಂದವು, ಆದರೆ ಈ ಹಾಡಿಗೆ ಬಾಲಮುರುಳಿ ಕೃಷ್ಣ  ಅವರ ಧ್ವನಿ ಚೆನ್ನಾಗಿ ಒಗ್ಗುತ್ತದೆ ಎಂದು ಯೋಚಿಸಿದೆವು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

ಮೊದಲಿಗೆ ಬಾಲಮುರುಳಿ ಕೃಷ್ಣ ಅವರು ಹಾಡಲು ಒಪ್ಪಿಕೊಳ್ಳಲಿಲ್ಲ. ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ನಾನು ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಲ್ಲಿ ಮನವಿ ಮಾಡಿಕೊಂಡೆವು. ಚಿತ್ರದ ಸಂದರ್ಭದ ಬಗ್ಗೆ ಮನವರಿಕೆ ಮಾಡಿಕೊಟ್ಟೆವು. ಮತ್ತೆ ಎರಡು ಬಾರಿ ಮನವಿ ಮಾಡಿದೆವು. ನಂತರ ನಮ್ಮ ಮನವಿಗೆ ಓಗೊಟ್ಟು ಹಾಡಿಗೆ ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡರು . ರಾತ್ರಿ 9 ಗಂಟೆಗೆ ರೆಕಾರ್ಡಿಂಗ್ ರೂಮ್ ಗೆ ಬಂದವರು ಬೆಳಗಿನ ಜಾನ 3 ಗಂಟೆಗೆ ಹಾಡು ಮುಗಿಸಿ ಹೊರಟರು. ಎಂದು ತಮ್ಮ 15 ವರ್ಷದ ಹಿಂದಿನ ನೆನಪನ್ನು ರಾಜೇಂದ್ರ ಸಿಂಗ್ ಬಾಬು ಬಿಚ್ಚಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com