'ಲೀ' ಮೂಲಕ ಕನ್ನಡ ಚಿತ್ರರಂಗಕ್ಕೆ ಆನಂದ್ ರಾಜ ವಿಕ್ರಂ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ

ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಂ 'ಲೀ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಎಚ್ ಎಂ ಶ್ರೀನಂದನ್ ನಿರ್ದೇಶಿಸುತ್ತಿರುವ ಈ
ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್
ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್
ಬೆಂಗಳೂರು: ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಂ 'ಲೀ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಎಚ್ ಎಂ ಶ್ರೀನಂದನ್ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್ ಮುಖ್ಯ ನಟರು. 
ಎಂಜಿನಿಯರಿಂಗ್ ಪದವಿ ಮುಗಿಸಿರುವ ೨೭ ವರ್ಷದ ತಂತ್ರಜ್ಞ ಆನಂದ್ ಹೇಳುವಂತೆ "ನಾನು ಸೌಂಡ್ ಎಂಜಿನಿಯರಿಂಗ್ ಓದುವುದಾಗಿ ನಮ್ಮ ಪೋಷಕರಿಗೆ ಹೇಳಿದ್ದೆ ಆದರೆ ಅದು ಡಿಪ್ಲೊಮೊ ಪದವಿ ಆಗಿತ್ತು ಆದುದರಿಂದ ನಾನು ಸಿವಿಲಿ ಎಂಜಿನಿಯರಿಂಗ್ ಮುಗಿಸಿದೆ" ಎನ್ನುತ್ತಾರೆ. 
ಕಾಲೇಜಿನಲ್ಲಿ 'ಫ್ಲೀ' ಎಂಬ ಸಂಗೀತ ಬ್ಯಾಂಡ್ ನ ಸದಸ್ಯ ಆನಂದ್. 'ಅಗ್ರಜ' ಸಿನೆಮಾದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ಶ್ರೀನಂದನ್ ತಮ್ಮ ಕಾಲೇಜು ಗೆಳೆಯನ ಶಿಫಾರಸ್ಸಿನ ಮೇರೆಗೆ ಆನಂದ್ ಅವರನ್ನು ಎರಡನೇ ಸಿನೆಮಾಗೆ ಆಯ್ಕೆ ಮಾಡಿದ್ದಾರೆ. 
'ಲೀ' ಸಿನೆಮಾದ ಸಂಗೀತ ಮಾರ್ಷಿಯಲ್ ಕಲೆಯ ಸುತ್ತ ಸುತ್ತುತ್ತದೆ ಎಂದು ವಿವರಿಸುವ ಆನಂದ್ "'ಲೀ' ಎಂಬುದು ಬ್ಯಾಂಡ್ ಹೆಸರು ಮತ್ತು ಬ್ರೂಸ್ ಲೀ ಹಾಗು ಜೆಟ್ ಲೀ ಅವರಿಗೆ ಸಂಬಂಧಿಸಿದ್ದು. ಈ ಸಿನೆಮಾದ ಪ್ರಮುಖ ನಟನ ಪಾತ್ರದ ಹೆಸರು ಕೂಡ ಲೀ. ನಿರ್ದೇಶಕ ನನಗೆ ಕಥೆ ಹೇಳಿದಾಗ ಲೀ ಹೆಸರಿನಲ್ಲಿ ಪವರ್ ಇದೆ ಎಂದೆನಿಸಿತು. 
ನಿರ್ದೇಶಕರ ಈ ಐಡಿಯಾವನ್ನೇ ಅನುಸರಿಸಿ, ನಾನು ಪವರ್ ಇರುವ ಸಂಗೀತ ನೀಡಿದ್ದೇನೆ. ಜೊತೆಗೆ ರೊಮ್ಯಾಂಟಿಕ್ ಮೆಲೋಡಿ ಕೂಡ ಇರಲಿದೆ" ಎನ್ನುತ್ತಾರೆ. 
ಎ ಆರ್ ರೆಹಮಾನ್ ತಮ್ಮ ಸಂಗೀತಕ್ಕೆ ಸ್ಫೂರ್ತಿ ಎನ್ನುತ್ತಾರೆ ಆನಂದ್. 'ಲೀ' ಸಿನೆಮಾದ ಹಿನ್ನಲೆ ಸಂಗೀತವನ್ನು ಗುರುಕಿರಣ್ ಒದಗಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com