ನಟ ನಿಖಿಲ್
ಸಿನಿಮಾ ಸುದ್ದಿ
ಮುಂದಿನ ಚಿತ್ರಕ್ಕೆ ಕನ್ನಡ ನಿರ್ದೇಶಕರನ್ನು ಅರಸಿ ಹೊರಟ ನಿಖಿಲ್
'ಜಾಗ್ವಾರ್' ಮೂಲಕ ಸಾಧಾರಣ ಯಶಸ್ಸು ಗಳಿಸಿ ಗಮನ ಸೆಳೆಯಲು ಯಶಸ್ವಿಯಾದ ನಟ ನಿಖಿಲ್, ಈಗ ಎರಡನೇ ಸಿನೆಮಾ ಪ್ರಾರಂಭಿಸುವುದಕ್ಕೆ ಸಿದ್ಧರಾಗಿದ್ದಾರೆ.
ಬೆಂಗಳೂರು: 'ಜಾಗ್ವಾರ್' ಮೂಲಕ ಸಾಧಾರಣ ಯಶಸ್ಸು ಗಳಿಸಿ ಗಮನ ಸೆಳೆಯಲು ಯಶಸ್ವಿಯಾದ ನಟ ನಿಖಿಲ್, ಈಗ ಎರಡನೇ ಸಿನೆಮಾ ಪ್ರಾರಂಭಿಸುವುದಕ್ಕೆ ಸಿದ್ಧರಾಗಿದ್ದಾರೆ.
ಇದಕ್ಕೂ ಮೊದಲು ನಿಗದಿಯಾದಂತೆ ನಟ ತಮ್ಮ ಎರಡನೇ ಸಿನೆಮಾವನ್ನು ತೆಲುಗು ನಿರ್ದೇಶಕ ಸುರೇಂದರ್ ರೆಡ್ಡಿ ಅವರೊಂದಿಗೆ ಮಾಡಲಿದ್ದಾರೆ ಎನ್ನಲಾಗಿತ್ತು, ಆದರೆ ಈಗ ಮೂಲಗಳು ಹೇಳುವಂತೆ ಅದನ್ನು ಮುಂದೂಡಲಾಗಿದ್ದು, ಈಗ ಕನ್ನಡ ನಿರ್ದೇಶಕ ಜೊತೆಗೆ ನಿಖಿಲ್ ತಮ್ಮ ಎರಡನೇ ಸಿನೆಮಾದಲ್ಲಿ ನಟಿಸಲಿದ್ದಾರೆ.
ನಿಖಿಲ್ ಸದ್ಯಕ್ಕೆ ಎಸ್ ಕೃಷ್ಣ ಮತ್ತು ಎ ಹರ್ಷ ಅವರ ಸ್ಕ್ರಿಪ್ಟ್ ಗಳನ್ನು ಒಪ್ಪಿದ್ದಾರಂತೆ. "ಇಬ್ಬರು ನಿರ್ದೇಶಕರೂ ರೇಸ್ ನಲ್ಲಿದ್ದು, ಅದ್ಭುತವಾದ ಸ್ಕ್ರಿಪ್ಟ್ ಹೊಂದಿದ್ದಾರೆ" ಎನ್ನುತ್ತವೆ ಮೂಲಗಳು.
"ಸರಣಿ ಚರ್ಚೆಗಳು ನಡೆಯುತ್ತಿವೆ ಜೊತೆಗೆ ಸ್ಕ್ರಿಪ್ಟ್ ಗಳು ಸಂಪೂರ್ಣಗೊಳ್ಳುತ್ತಿವೆ. ಮೊದಲು ಸಿದ್ಧರಾದವರ ಜೊತೆಗೆ ನಿಖಿಲ್ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಇವುಗಳಲ್ಲಿ ಒಂದು ಯೋಜನೆ ಏಪ್ರಿಲ್ ೨೦೧೭ ಕ್ಕೆ ಪ್ರಾರಂಭವಾಗಲಿದೆ" ಎನ್ನುತ್ತವೆ ಮೂಲಗಳು.
ಈ ಸಿನೆಮಾ ಕೂಡ ದ್ವಿಭಾಷಾ ಚಿತ್ರವಾಗಲಿದ್ದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ. "ಸದ್ಯಕ್ಕೆ ಕೃಷ್ಣ ಸುದೀಪ್ ಅವರ 'ಹೆಬ್ಬುಲಿ' ಚಿತ್ರದಲ್ಲಿ ನಿರತರಾಗಿದ್ದು, ನಿಖಿಲ್ ಸಿನೆಮಾವನ್ನು ಜನವರಿಯಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ" ಎನ್ನುವ ಮೂಲಗಳು ಇದೆ ಸಮಯದಲ್ಲಿ ಹರ್ಷ ಪುನೀತ್ ಜೊತೆಗೆ ತಮಿಳಿನ 'ಪೂಜೈ' ರಿಮೇಕ್ ನಲ್ಲಿ ನಿರತರಾಗಿರುತ್ತಾರೆ. ಹರ್ಷ ನಿರ್ದೇಶನದಲ್ಲಿ ನಿಖಿಲ್ ಅವರ ಮೂರನೇ ಚಿತ್ರ ಮೂಡುವ ಸಾಧ್ಯತೆ ಹೆಚ್ಚಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ