ಪಾಕಿಸ್ತಾನಿ ಕಲಾವಿದರು ವೀಸಾ ಜೊತೆಗೆ ಬಂದಿದ್ದಾರೆ, ಕಾನೂನು ಉಲ್ಲಂಘಿಸಿಲ್ಲ: ಓಂಪುರಿ

ಕಲೆ ಮತ್ತು ರಾಜಕೀಯವನ್ನು ಬೇರ್ಪಡಿಸಿ ಇಡಬೇಕು ಮತ್ತು ಕಲಾವಿದರನ್ನು ನಿಷೇಧಿಸುವುದರಿಂದ ಪರಿಹಾರ ಸಿಗುವುದಿಲ್ಲ ಎಂದಿರುವ ಖ್ಯಾತ ನಟ ಓಂಪುರಿ ಮತ್ತು ನಿರ್ದೇಶಕ ನಾಗೇಶ್ ಕುಕೊನೂರ್,
ನಟ ಓಂಪುರಿ
ನಟ ಓಂಪುರಿ
ಮುಂಬೈ: ಕಲೆ ಮತ್ತು ರಾಜಕೀಯವನ್ನು ಬೇರ್ಪಡಿಸಿ ಇಡಬೇಕು ಮತ್ತು ಕಲಾವಿದರನ್ನು ನಿಷೇಧಿಸುವುದರಿಂದ ಪರಿಹಾರ ಸಿಗುವುದಿಲ್ಲ ಎಂದಿರುವ ಖ್ಯಾತ ನಟ ಓಂಪುರಿ ಮತ್ತು ನಿರ್ದೇಶಕ ನಾಗೇಶ್ ಕುಕೊನೂರ್, ಪಾಕಿಸ್ತಾನಿ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ. 
ಪಾಕಿಸ್ತಾನಿ ಕಲಾವಿದರು ಕಾನೂನುಬದ್ಧವಾಗಿ ಇಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ವಾಪಸ್ ಕಳುಹಿಸಿದರೆ ಅವರನ್ನು ತಮ್ಮ ಸಿನೆಮಾಗಳಿಗಾಗಿ ಕರೆತಂದಿರುವ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಲಿದೆ ಎಂದು ಕೂಡ ಓಂಪುರಿ ಹೇಳಿದ್ದಾರೆ. 
"ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವಾಗ, ನಾವೆಲ್ಲಾ ಸುಮ್ಮನೆ ಕೂರಬೇಕು. ಇಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಲಾವಿದರನ್ನು ವಾಪಸ್ ಕಳುಹಿಸಿದರೆ ಅಥವಾ ಇಲ್ಲೇ ಉಳಿಯಲು ಬಿಟ್ಟರೆ, ಏನು ಬದಲಾಗುವುದಿಲ್ಲ. ನಾನು ಪಾಕಿಸ್ತಾನಕ್ಕೆ ಆರು ಬಾರಿ ಹೋಗಿದ್ದೇನೆ ಮತ್ತು ಅಲ್ಲಿ ಎಲ್ಲ ರೀತಿಯ ಜನಗಳನ್ನು ಭೇಟಿ ಮಾಡಿದ್ದೇನೆ" ಎಂದು 65 ವರ್ಷದ ನಟ ಹೇಳಿದ್ದಾರೆ. 
"ನನ್ನನ್ನು ಅಲ್ಲಿ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಈಗ ಪಾಕಿಸ್ತಾನಿ ಕಲಾವಿದರು ತಾವು ತೊಡಗಿಸಿಕೊಂಡಿರುವ ಸಿನೆಮಾಗಳನ್ನು ತೊರೆದರೆ, ಭಾರತದ ಜನಕ್ಕೂ ಹೆಚ್ಚು ಆರ್ಥಿಕ ನಷ್ಟವಾಗಲಿದೆ. ಆ ನಟರು ಇಲ್ಲಿಗೆ ಕಾನೂನುಬಾಹಿರವಾಗಿ ಬಂದಿಲ್ಲ. ಅವರ ಬಳಿ ಕಾನೂನುಬದ್ಧವಾದ ವೀಸಾ ಇದೆ. ಸರ್ಕಾರವೇ ಅವರಿಗೆ ವಾಪಸ್ ಹೋಗುವಂತೆ ಹೇಳಿದರೆ ಆ ಮಾತು ಬೇರೆ" ಎಂದು ಓಂಪುರಿ ಹೇಳಿದ್ದಾರೆ. 
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಸಂಕೀರ್ಣವಾಗಿದ್ದು ಕಲೆಯನ್ನು ರಾಜಕೀಯದಿಂದ ಹೊರಗಿಡಬೇಕು ಎಂದು ನಿರ್ದೇಶಕ ನಾಗೇಶ್ ಕುಕೊನೂರ್ ಹೇಳಿದ್ದಾರೆ. 
ಇನ್ನು ಹಲವಾರು ಭಾರತೀಯ ಕಲಾವಿದರು, ನಿರ್ದೇಶಕರು ಪಾಕಿಸ್ತಾನಿ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ ನಟ ರಣದೀಪ್ ಹೂಡ, ಅನುಪಮ್ ಖೇರ್, ನಿರ್ದೇಶಕ ಅಶೋಕ್ ಪಂಡಿತ್ ನಿಷೇಧಕ್ಕೆ ಬೆಂಬಲ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com