ಎಂ.ಎಸ್. ರಾಜಶೇಖರ್ ನಿರ್ದೇಶನದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ 1989ರಲ್ಲಿ ಬಿಡುಗಡೆಯಾದ ಚಿತ್ರ ನಂಜುಂಡಿ ಕಲ್ಯಾಣ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಚಿತ್ರದ ಹಾಡುಗಳು ಕೂಡ ಇಂದಿಗೂ ಜನಮಾನಸದಿಂದ ಮರೆಯಾಗಿಲ್ಲ.
27 ವರ್ಷಗಳು ಕಳೆದ ನಂತರ ಇಂದು ಅದೇ ಶೀರ್ಷಿಕೆ ಇಟ್ಟುಕೊಂಡು ಹೊಸ ಬಗೆಯ ಚಿತ್ರವನ್ನು ತಯಾರಿಸಲಿದೆ ಮತ್ತೊಂದು ಚಿತ್ರತಂಡ. ಈ ಹೊಸ ನಂಜುಂಡಿ ಕಲ್ಯಾಣ ಚಿತ್ರಕ್ಕೆ ತನುಷ್ ಹೀರೋ. ಮಡಮಕ್ಕಿ ಬಳಿಕ ತನುಷ್ ನಟಿಸುತ್ತಿರುವ ಚಿತ್ರವಿದು. ಚಿತ್ರಕ್ಕೆ ರಾಜೇಂದ್ರ ಕಾರಂತ್ ನಿರ್ದೇಶಕರು. ಈ ಹಿಂದೆ ರಾಜೇಂದ್ರ ಕಾರಂತ್ ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಿದ್ದರು. ಈಗ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ.
ಅಮ್ಮ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸಲು ಪಡುವ ಸಾಹಸವೇ ನಂಜುಂಡಿ ಕಲ್ಯಾಣ ಚಿತ್ರದ ಸಾರಾಂಶ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಕೂಡ ರಾಜೇಂದ್ರ ಕಾರಂತ್ ಅವರದ್ದೇ.