
ಮುಂಬೈ: ನಟಿ ನಿಖಿತಾ ತುಕ್ರಾಲ್ ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಮಾಗೋ ಜತೆ ಇದೇ ಶನಿವಾರ ಮತ್ತು ಭಾನುವಾರ ಸಪ್ತಪದಿ ತುಳಿಯಲಿದ್ದಾರೆ.
ಮುಂಬೈನ ಫೈವ್ ಸ್ಟಾರ್ ಹೊಟೇಲ್ ನಲ್ಲಿ ನಿಖಿತಾ-ಗಗನ್ ದೀಪ್ ಜೋಡಿಯ ಮದುವೆ ಸಮಾರಂಭ ನಡೆಯಲಿದೆ. ಮದುವೆಗೆ ನಾಳೆಯಿಂದ ಚಾಲನೆ ದೊರೆಯಲಿದ್ದು ಗುರುವಾರ ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು ಬಳಿಕ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ನಿಖಿತಾ ತಮ್ಮ ಮದುವೆಯಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬವರ್ಗದವರು ಭಾಗಿಯಾಗಲಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಕರ ಮದುವೆಯಲ್ಲಿ ನನ್ನನ್ನು ನೋಡಿದ ಗಗನ್ ದೀಪ್ ಗೆ ಮೊದಲ ನೋಟದಲ್ಲೆ ಪ್ರೇಮವಾಗಿತ್ತು. ನಂತರ ಅವರು ನನಗೆ ಮುಂಬೈನ ರೆಸ್ಟೋರೆಂಟ್ ವೊಂದರಲ್ಲಿ ಉಂಗುರ ನೀಡಿ ಪ್ರಪೋಸ್ ಮಾಡಿದರು. ನಂತರ ಕುಟುಂಬದವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರಂತೆ.
Advertisement